ಡರ್ಬನ್: ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ತವರಿನಲ್ಲಿ ಪಾಕಿಸ್ತಾನ ವನಿತೆಯರ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯವಿರುವಂತೆಯೇ ಗೆದ್ದುಕೊಂಡಿದೆ.
ಡರ್ಬನ್ನಲ್ಲಿ ಶನಿವಾರ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿತ್ತು. ಆರಂಭಿಕ ಬ್ಯಾಟರ್ ಲಿಜೆಲ್ಲೆ ಲೀ 47, ವೋಲ್ವಾರ್ಟ್ 27, ಸುನೆ ಲ್ಯೂಸ್ 32, ಮರೆಝಾನ್ನೆ ಕಾಪ್ ಅಜೇಯ 68 ರನ್ ಗಳಿಸಿದರು.
ಪಾಕಿಸ್ತಾನ ಪರ ನಶ್ರ ಸಂದು 2, ದಿಯಾನ ಬೇಗ್ 2 , ಫಾತಿಮಾ ಸನಾ ಮತ್ತು ಸಾದಿಯಾ ಇಕ್ಬಾಲ್ ತಲಾ ಒಂದು ವಿಕೆಟ್ ಪಡೆದರು.