ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪಾಯಿ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಇನ್ನು ಒಂದು ಪಂದ್ಯವಿರುವಂತೆ 5 ಪಂದ್ಯಗಳ ಸರಣಿಯನ್ನು 3-1ರಲ್ಲಿ ವಶ ಪಡಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್ ಪಡೆ ನಿಗದಿತ 50 ಓವರ್ಗಳಲ್ಲಿ ಪೂನಮ್ ರಾವುತ್(104) ಅವರ ಶತಕ ಹಾಗೂ ಹರ್ಮನ್ ಪ್ರೀತ್ ಕೌರ್(54) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 266 ರನ್ಗಳಿಸಿತ್ತು.
ಪೂನಮ್ ರಾವುತ್ 123 ಎಸೆತಗಳಲ್ಲಿ 10 ಬೌಂಡರಿ ಸಹಿತ 104 ರನ್ಗಳಿಸಿದೆ, ಕೌರ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 54 ರನ್ಗಳಿಸಿದರು. ಆದರೆ ಉಪನಾಯಕಿ ಮಂಧಾನ ಕೇವಲ 10 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದು ಹಾಗೂ ಪೂನಿಯಾ 32(51 ಎಸೆತ) ಮತ್ತು ಮಿಥಾಲಿ 45(71ಎಸೆತ) ರನ್ಗಳಿಸಿ 266ರನ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.