ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​​ ಮಾರಕ ಬೌಲಿಂಗ್​ ದಾಳಿ ... ಫಾಲೋಆನ್​ಗೆ ತುತ್ತಾಗಿ, ಇನ್ನಿಂಗ್ಸ್​ ಸೋಲಿನ ಭೀತಿಯಲ್ಲಿರುವ ದ.ಆಫ್ರಿಕಾ - ಹರಿಣಗಳಿಗೆ ಫಾಲೋ ಆನ್​ ಏರಿದ ಇಂಗ್ಲೆಂಡ್

ದಕ್ಷಿಣ ಆಫ್ರಿಕಾ ತಂಡವನ್ನು 209ರನ್​ಗಳಿಗೆ ಆಲೌಟ್​ ಮಾಡಿರುವ ಇಂಗ್ಲೆಂಡ್​ ತಂಡ ನಾಲ್ಕನೇ ಫಾಲೋಆನ್​ ಏರಿದ್ದು ಇನ್ನಿಂಗ್ಸ್​ ಗೆಲುವಿನ ಲೆಕ್ಕಾಚಾರದಲ್ಲಿದೆ.

SA vs Eng
SA vs Eng

By

Published : Jan 19, 2020, 7:40 PM IST

Updated : Jan 20, 2020, 5:29 PM IST

ಪೋರ್ಟ್​ ಎಲಿಜಬತ್​:ಇಂಗ್ಲೆಂಡ್​ ಬೌಲಿಂಗ್​ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೂರನೇ ಟೆಸ್ಟ್​ನಲ್ಲಿ ಇನ್ನಿಂಗ್ಸ್​ ಸೋಲಿನ ಭೀತಿಗೆ ಸಿಲುಕಿದೆ.

ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ ಬೆನ್​ಸ್ಟೋಕ್ಸ್​(120) ಹಾಗೂ ಒಲ್ಲಿ ಪೋಪ್​(135*) ಅವರ ಭರ್ಜರಿ ಶತಕದ ನೆರವಿನಿಂದ 152 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 499 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿತು.

ದಕ್ಷಿಣ ಆಫ್ರಿಕಾ ಪರ ಕೇಶವ್​ ಮಹಾರಾಜ್​ 5 ವಿಕೆಟ್​, ಕಗಿಸೋ ರಬಡಾ 2 ಆನ್ರಿಚ್​ ನಾರ್ಟ್ಜ್​ ತಲಾ ಒಂದು ವಿಕೆಟ್​ ಪಡೆದರು.

499 ರನ್​ಗಳ ಬೃಹತ್​ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್​ನ ಯುವ ಸ್ಪಿನ್ನರ್​ ಡೊಮೆನಿಕ್​ ಬೆಸ್​(5) ಹಾಗೂ ಬ್ರಾಡ್​(3) ಬೌಲಿಂಗ್​ ದಾಳಿಗೆ ಸಿಲುಕಿ 209ರನ್ ​ಗಳಿಗೆ ಆಲ್​ಔಟ್​ ಆಯಿತು. 63 ರನ್​ಗಳಿಸಿದ ಕ್ವಿಂಟನ್ ಡಿ ಕಾಕ್​ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಇವರನ್ನು ಡೀನ್​ ಎಲ್ಗರ್ 35 ರನ್​ಗಳಿಸಿದರೆ, ಆ್ಯನ್ರಿಚ್​ ನಾರ್ಟ್ಜ್​ ಬರೋಬ್ಬರಿ 136 ಎಸೆತಗಳನ್ನು ಎದುರಿಸಿ ಕ್ರೀಸ್​ನಲ್ಲಿ ಹೆಚ್ಚು ಸಮಯ ಕಳೆದರು. ಇವರು 18 ರನ್​ಗಳಿಸಿ ಸ್ಟೋಕ್ಸ್​ಗೆ ವಿಕೆಟ್​ ಒಪ್ಪಿಸಿದರು.

ದಕ್ಷಿಣ ಆಫ್ರಿಕಾ 209ರನ್​ಗಳಿಗೆ ಆಲೌಟ್​ ಆಗುತ್ತಿದ್ದಂತೆ ಇಂಗ್ಲೆಂಡ್​ ತಂಡ ಫಾಲೋಆನ್​ ಏರಿತು. ದುರಾದೃಷ್ಟವೆಂದರೆ ಎರಡನೇ ಇನ್ನಿಂಗ್ಸ್​ನಲ್ಲೂ ಹರಿಣ ಪಡೆ ಕೆಟ್ಟ ಆರಂಭ ಪಡೆದಿದ್ದು 44 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದೆ.

Last Updated : Jan 20, 2020, 5:29 PM IST

ABOUT THE AUTHOR

...view details