ಒವೆಲ್:ಅಂಡರ್-19 ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಗೆಲುವಿನ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹರಿಣಗಳಿಗೆ ಆಫ್ಘಾನ್ ಬೌಲರ್ ಮಾರಕ ಬೌಲಿಂಗ್ ದಾಳಿಗೆ ತುತ್ತಾಗಿ 129ರನ್ಗಳಿಗೆ ಆಲೌಟ್ ಆಯಿತು. ಆರಂಭಿಕರಾಗಿ ಕಣಕ್ಕಿಳಿದ ಆಂಡ್ರ್ಯೋ ಲೂವ್(2) ಹಾಗೂ ಜೋನಾಥನ್ ಬಿರ್ಡಾ(0)ರನ್ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಕ್ಯಾಪ್ಟನ್ ಬ್ರೈಸಿ ಪ್ರಸನ್ಸ್ 40ರನ್ ಹಾಗೂ ಲೂಕಿ ಬೈಪೂರ್ಟ್ 25ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು.
ಉತ್ತಮವಾಗಿ ಆಡುತ್ತಿದ್ದ ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ಯಾವುಬ್ಬ ಆಟಗಾರ ಸಹ ಎರಡಕ್ಕಿ ದಾಟಲಿಲ್ಲ. ಆದರೆ ಕೊನೆಯದಾಗಿ ಬಂದ ಗ್ರೆಲ್ಡ್ 23 ಎಸೆತಗಳಲ್ಲಿ 38ರನ್ಗಳಿಕೆ ಮಾಡಿ ತಂಡ 100ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ತಂಡ 29.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 129ರನ್ಗಳಿಸಿತ್ತು.