ಜೋಹನ್ಸ್ಬರ್ಗ್:ದಕ್ಷಿಣ ಆಫ್ರಿಕಾ ಆಲ್ರೌಂಡ್ ಪ್ರದರ್ಶನ ತೋರಿ ಶ್ರೀಲಂಕಾ ತಂಡವನ್ನು ಎರಡನೇ ಟೆಸ್ಟ್ನಲ್ಲಿ 10 ವಿಕೆಟ್ಗಳಿಂದ ಮಣಿಸುವ ಮೂಲಕ 2-0ಯಲ್ಲಿ ಟೆಸ್ಟ್ ಸರಣಿ ಜಯಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಶ್ರೀಲಂಕಾ 157ಕ್ಕೆ ಆಲೌಟ್ ಆದರೆ, ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 302 ರನ್ಗಳಿಗೆ ಆಲೌಟ್ ಆದರೂ 145 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ 2ನೇ ದಿನ 4 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತ್ತು.
ಮೂರನೇ ದಿನವಾದ ಇಂದು ಶ್ರೀಲಂಕಾ ತಂಡ 211 ರನ್ಗಳಿಗೆ ಆಲೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ 67 ರನ್ಗಳ ಸಾಧಾರಣ ಗುರಿ ನೀಡಿತ್ತು. ನಿನ್ನೆ 91 ರನ್ಗಳಿಸಿದ್ದ ಕರುಣರತ್ನೆ ಇಂದು 103 ರನ್ ಗಳಿಸಿ ಔಟಾದರು. ಇನ್ನಿಂಗ್ಸ್ ಸೋಲನ್ನು ತಪ್ಪಿಸಲು ಯಶಸ್ವಿಯಾದರೂ ಲಂಕಾ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಲಾಗಲಿಲ್ಲ.