ಜೋಹಾನ್ಸ್ಬರ್ಗ್:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಫಾಫ್ ಡು ಪ್ಲೆಸಿಸ್ ಉತ್ತಮ ಪ್ರದರ್ಶನ ನೀಡಿದ್ದರ ಫಲವಾಗಿ ಇದೀಗ ದಕ್ಷಿಣ ಆಫ್ರಿಕಾ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಇದೇ ವರ್ಷ ಫೆಬ್ರವರಿಯಲ್ಲಿ ಡು ಪ್ಲೆಸಿಸ್ ಆಸ್ಟ್ರೇಲಿಯಾ ವಿರುದ್ಧ ಟಿ-20 ಪಂದ್ಯದಲ್ಲಿ ಕೊನೆಯದಾಗಿ ಭಾಗಿಯಾಗಿದ್ದರು. ಆದರೆ 2019ರಲ್ಲಿ ಮುಕ್ತಾಯಗೊಂಡ ವಿಶ್ವಕಪ್ ಬಳಿಕ ಅವರು ಏಕದಿನ ತಂಡದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಇದೀಗ ತಂಡದಲ್ಲಿ ಅವಕಾಶ ಪಡೆದುಕೊಳ್ಳುವುದರ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಟಿ-20 ಹಾಗೂ ಏಕದಿನ ಕ್ರಿಕೆಟ್ ಸರಣಿ ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು, ಅದಕ್ಕಾಗಿ 24 ಸದಸ್ಯರ ಆಫ್ರಿಕ ತಂಡ ಪ್ರಕಟಗೊಂಡಿದೆ. ನವೆಂಬರ್ 27ರಿಂದ ಡಿಸೆಂಬರ್ 9ರವರೆಗೆ ಈ ಟೂರ್ನಿ ನಡೆಯಲಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್ ತಂಡ ಮುನ್ನಡೆಸಲಿದ್ದು, ಕೋವಿಡ್ ನಂತರ ದಕ್ಷಿಣ ಆಫ್ರಿಕಾ ಭಾಗಿಯಾಗುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ.
ತಂಡ ಇಂತಿದೆ: ಕ್ವಿಂಟನ್ ಡಿಕಾಕ್, ಬಾವುಮಾ, ಜೂನಿಯರ್ ದಲಾ, ಫಾಫ್ ಡು ಪ್ಲೆಸಿಸ್, ಫಾರ್ಚುಯಿನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಮಲನ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಕ್ ನಾರ್ಟ್ಜೆ, ಫೆಹ್ಲುಕ್ವಾಯೊ, ಕಗಿಸೋ ರಬಾಡ, ಶಮ್ಸಿ, ಸಿಪಮ್ಲಾ, ಸ್ಮಟ್ಸ್, ಡುಸೆನ್, ವೆರೆನ್ನೆ, ಬಿಲ್ಜಾನ್.