ಕೇಪ್ ಟೌನ್:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್‌ಸಿಬಿ ಪರ ಆಡುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೈನ್, 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡದಿರಲು ನಿರ್ಧರಿಸುವುದಾಗಿ ಶನಿವಾರ ತಿಳಿಸಿದ್ದಾರೆ.
ಕೇವಲ 2021ರ ಐಪಿಎಲ್ನಿಂದ ಮಾತ್ರ ಹೊರ ಹೋಗುತ್ತಿದ್ದೇನೆ. ಆದರೆ ಈ ನಿರ್ಧಾರವನ್ನು ಆರ್‌ಸಿಬಿ ಅಥವಾ ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
"ಈ ವರ್ಷದ ಐಪಿಎಲ್‌ನಲ್ಲಿ ನಾನು ಆರ್‌ಸಿಬಿ ತಂಡಕ್ಕೆ ಲಭ್ಯನಾಗುವುದಿಲ್ಲ ಎಂದು ಎಲ್ಲರಿಗೂ ತಿಳಿಸಲು ಇದೊಂದು ಚಿಕ್ಕ ಸಂದೇಶ. ಆದರೆ ನಾನು ಮತ್ತೊಂದು ತಂಡಕ್ಕಾಗಿ ಆಡುವ ಯೋಜನೆಯನ್ನು ಹೊಂದಿಲ್ಲ, ಆ ಟೂರ್ನಿ ನಡೆಯುವ ಸಂದರ್ಭದಲ್ಲಿ ವಿಶ್ರಾಂತಿ ಬಯಸಿದ್ದೇನೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಆರ್‌ಸಿಬಿಗೆ ಧನ್ಯವಾದಗಳು. ಆದರೆ ನಾನು ನಿವೃತ್ತನಾಗಿಲ್ಲ" ಎಂದು ಅವರು ತಿಳಿಸಿದ್ದಾರೆ.