ಕರ್ನಾಟಕ

karnataka

ETV Bharat / sports

ಭಾರತದ ಪಿಚ್​ ಅರಿತ ಈ ಇಬ್ಬರು ಆಟಗಾರರೇ ಆಫ್ರಿಕನ್ನರ ಅಸ್ತ್ರ..! - ವಿರಾಟ್ ಕೊಹ್ಲಿ ಸುದ್ದಿ

ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿರುವ ಟಿ-20 ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭವಾಗಲಿದೆ. ಅಕ್ಟೋಬರ್ 2ರಂದು ಮೊದಲ ಟೆಸ್ಟ್ ನಡೆಯಲಿದೆ.

ದಕ್ಷಿಣ ಆಫ್ರಿಕಾ

By

Published : Sep 12, 2019, 12:39 PM IST

ಹೈದರಾಬಾದ್: ಟೀಂ ಇಂಡಿಯಾ ವಿರುದ್ಧ ಮೂರು ಟಿ-20 ಹಾಗೂ ಮೂರು ಟೆಸ್ಟ್ ಪಂದ್ಯವನ್ನಾಡಲು ಈಗಾಗಲೇ ಭಾರತಕ್ಕೆ ಬಂದಿಳಿದಿರುವ ದಕ್ಷಿಣ ಆಫ್ರಿಕಾ ಬಲಿಷ್ಠ ಕೊಹ್ಲಿ ಪಡೆಗೆ ಟಕ್ಕರ್ ನೀಡಲು ಭರ್ಜರಿ ಪ್ಲಾನ್ ನಡೆಸಿದೆ.

ಟೆಸ್ಟ್​​ ಜೀವನದಲ್ಲೇ ಮೊದಲ ಸಲ ಓಪನರ್​ ಆಗಿ ರೋಹಿತ್ ಕಣಕ್ಕೆ​​; ಅಬ್ಬರಿಸ್ತಾರಾ ಮುಂಬೈಕರ್​?

ದಕ್ಷಿಣ ಆಫ್ರಿಕಾ ಆಟಗಾರರಾದ ಕ್ವಿಂಟನ್ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಭಾರತದ ಪಿಚ್​ನಲ್ಲಿ ಪರಿಣಿತರಾಗಿದ್ದು, ಕೊಹ್ಲಿ ಬಳಗವನ್ನು ಮಣಿಸಲು ಇವರನ್ನೇ ಅಸ್ತ್ರವಾಗಿಸಲಿದ್ದೇವೆ ಎಂದು ಉಪನಾಯಕ ವ್ಯಾನ್​ಡರ್ ಡಸ್ಸೆನ್ ಹೇಳಿದ್ದಾರೆ.

ಉಪನಾಯಕ ವ್ಯಾನ್​ಡರ್ ಡಸ್ಸೆನ್

ಭಾರತದ ಪಿಚ್​ ಸ್ಥಿತಿ, ವಾತಾವರಣ ಬಗ್ಗೆ ಮಿಲ್ಲರ್ ಹಾಗೂ ಡಿಕಾಕ್ ಬಳಿ ಕೇಳಿ ತಿಳಿದುಕೊಳ್ಳಲಿದ್ದೇವೆ. ಜೊತೆಗೆ ಟೀಂ ಇಂಡಿಯಾವನ್ನು ಸೋಲಿಸಲು ಯಾವ ಯೋಜನೆ ಹಾಕಿಕೊಳ್ಳಬೇಕು ಎನ್ನುವ ಕುರಿತಾಗಿ ಈ ಇಬ್ಬರು ಆಟಗಾರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ ಎಂದು ವ್ಯಾನ್​ಡರ್ ಡೆಸ್ಸೆನ್ ತಿಳಿಸಿದ್ದಾರೆ.

ಕ್ವಿಂಟನ್ ಡಿಕಾಕ್

ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿರುವ ಟಿ-20 ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭವಾಗಲಿದೆ. ಅಕ್ಟೋಬರ್ 2ರಂದು ಮೊದಲ ಟೆಸ್ಟ್ ನಡೆಯಲಿದೆ.

ಡೇವಿಡ್ ಮಿಲ್ಲರ್

ABOUT THE AUTHOR

...view details