ಕರ್ನಾಟಕ

karnataka

ETV Bharat / sports

ವ್ಯವಹಾರದಲ್ಲಿ ಸರ್ಕಾರದ ಮಧ್ಯ ಪ್ರವೇಶ: ನಿಷೇಧದ ಭೀತಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ - ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೇಟೆಸ್ಟ್ ನ್ಯೂಸ್

ಕ್ರಿಕೆಟ್ ದಕ್ಷಿಣ ಆಫ್ರಿಕಾ ವ್ಯವಹಾರಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸಲು ಉದ್ದೇಶಿಸಿದೆ ಎಂದು ಸರ್ಕಾರ ತಿಳಿಸಿದ್ದು, ಸೌಥ್ ಆಫ್ರಿಕಾ ಕ್ರಿಕೆಟ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸುವ ಸಾಧ್ಯತೆ ಇದೆ.

South Africa cricket in danger
ನಿಷೇಧದ ಭೀತಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್

By

Published : Oct 14, 2020, 9:44 PM IST

ಕೇಪ್ ಟೌನ್: ಕಳೆದ ವರ್ಷ ಡಿಸೆಂಬರ್‌ನಿಂದ ಸಂಭವಿಸಿದ ನಡೆದ ಆಡಳಿತ ಮತ್ತು ದುಷ್ಕೃತ್ಯದ ಕಾರಣ ಕ್ರಿಕೆಟ್ ದಕ್ಷಿಣ ಆಫ್ರಿಕಾ ವ್ಯವಹಾರಗಳಲ್ಲಿ ತಾನು ಮಧ್ಯ ಪ್ರವೇಶಿಸಲು ಉದ್ದೇಶಿಸಿರುವೆ ಎಂದು ಸರ್ಕಾರ ಹೇಳಿದ್ದು, ದಕ್ಷಿಣ ಆಫ್ರಿಕಾವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸುವ ಅಪಾಯ ಎದುರಾಗಿದೆ.

ಕ್ರೀಡಾ ಸಚಿವ ನಾಥಿ ಎಂಥೆತ್ವಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಉದ್ದೇಶಿತ ಕ್ರಮವನ್ನು ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಐಸಿಸಿಯ ಸಂವಿಧಾನವು ಸರ್ಕಾರದ ಹಸ್ತಕ್ಷೇಪವನ್ನು ನಿಷೇಧಿಸುತ್ತದೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವವರೆಗೆ ಶಿಕ್ಷೆ ಸಾಮಾನ್ಯವಾಗಿ ದೇಶದ ತಂಡಗಳಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧಿಸಲ್ಪಡುತ್ತದೆ.

ದಕ್ಷಿಣ ಆಫ್ರಿಕಾದ ಸರ್ಕಾರ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಡುವಿನ ಉದ್ವಿಗ್ನತೆಯು ಕ್ರಿಕೆಟ್ ಸಂಸ್ಥೆಯ ವ್ಯವಹಾರಗಳ ಬಗ್ಗೆ ದೀರ್ಘಕಾಲದ ತನಿಖೆಗೆ ಸಂಬಂಧಿಸಿದೆ. ಇದರ ಪರಿಣಾಮವಾಗಿ ಸಿಇಒ ಥಬಾಂಗ್ ಮೊರೊ ಅವರನ್ನು ಆಗಸ್ಟ್​ನಲ್ಲಿ ಗಂಭೀರ ದುಷ್ಕೃತ್ಯದ ಆರೋಪದ ಮೇಲೆ ವಜಾ ಮಾಡಿತ್ತು.

ಕ್ರಿಕೆಟ್ ಸೌತ್ ಆಫ್ರಿಕಾವನ್ನು ಸರ್ಕಾರ ಅಮಾನತುಗೊಳಿಸಿ ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ದಕ್ಷಿಣ ಆಫ್ರಿಕಾದ ಒಲಿಂಪಿಕ್ ಸಮಿತಿಗೆ ಕ್ರಿಕೆಟ್ ಉಸ್ತುವಾರಿ ನೀಡಲಾಗಿತ್ತು. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎನ್ನಲಾಗಿತ್ತು. ಆದರೆ ಇದನ್ನು ತಳ್ಳಿಹಾಕಿದ್ದ SASCO (ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ) ಕ್ರಿಕೆಟ್​ ದಕ್ಷಿಣ ಆಫ್ರಿಕಾ(ಸಿಎಸ್​ಎ) ವಿಷಯಗಳಲ್ಲಿ ತಮ್ಮ ಹಸ್ತಕ್ಷೇಪವನ್ನು ಸರ್ಕಾರದ ಹಸ್ತಕ್ಷೇಪ ಎಂದು ಹೇಳಲಾಗುವುದಿಲ್ಲ ಎಂದು ಐಸಿಸಿಗೆ ಪತ್ರದ ಮೂಲಕ ಸ್ಪಷ್ಟಪಡಿಸಿತ್ತು.

ABOUT THE AUTHOR

...view details