ಕರಾಚಿ:ಭಾರತ ಪ್ರವಾಸ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಆದರೆ ಇದೀಗ ಪಾಕ್ ಪ್ರವಾಸ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
'ಮುಂದಿನ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಪ್ರವಾಸಕ್ಕೆ ಸಿದ್ಧವಾಗಿದೆ ಈ ನಿಟ್ಟಿನಲ್ಲಿ ಹೊಸ ದಾರಿ ಹುಡುಕಲಾಗುವುದು. ಭದ್ರತೆಯ ಕಾರಣದಿಂದಾಗಿ ಈ ಪ್ರವಾಸ ರದ್ದುಮಾಡಿಲ್ಲ. ಆಟಗಾರರಿಗೆ ಸಮಯದ ಅಭಾವ ಇರುವ ಕಾರಣ ಪಾಕ್ ಪ್ರವಾಸ ರದ್ದುಗೊಂಡಿದೆ' ಎಂದು ಪಾಕ್ ಬೋರ್ಡ್ ತಿಳಿಸಿದೆ.