ಪುಣೆ:ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಭಾರತ ತಂಡ ಹರಿಣಗಳನ್ನು ಆಲೌಟ್ ಮಾಡುವ ಮೂಲಕ 326 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
36ಕ್ಕೆ 3 ವಿಕೆಟ್ ಕಳೆದುಕೊಂಡು ಮೂರನೇ ದಿನ ಆಟವಾರಂಭಿಸಿದ ಆಫ್ರಿಕಾ ಪರ ನೈಟ್ ವಾಚ್ಮನ್ಗಳಾಗಿದ್ದ ಆ್ಯನ್ರಿಚ್ ನಾರ್ಟ್ಜೆ(3) ಹಾಗೂ ಡಿ ಬ್ರಯಾನ್(30)ರನ್ನು ಬೇಗ ಔಟ್ ಮಾಡುವ ಮೂಲಕ ಯಾದವ್ ಹಾಗೂ ಶಮಿ ಭಾರತಕ್ಕೆ ಆರಂಭಿಕ ಮುನ್ನಡೆ ತಂಡದುಕೊಟ್ಟರು.
ಆದರೆ, ನಾಯಕ ಡುಪ್ಲೆಸಿಸ್(64) ಹಾಗೂ ಡಿಕಾಕ್(31) 17 ಓವರ್ಗಳ ಕಾಲ ಕ್ರೀಸ್ನಲ್ಲಿ ನಿಂತು 75ರನ್ಗಳ ಜೊತೆಯಾಟ ನಡೆಸಿ ಹರಿಣ ಪಡೆಯ ಪೆವಿಲಿಯನ್ ಪರೇಡ್ಗೆ ತಡೆಯೊಡ್ಡಿದರು. 31 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಡಿಕಾಕ್ರನ್ನು ಅಶ್ವಿನ್ ಬೌಲ್ಡ್ ಮಾಡಿದರು. ನಂತರ ಬಂದ ಮುತ್ತುಸ್ವಾಮಿ ಜಡೇಜಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. 117ಎಸೆತಗಳಲ್ಲಿ 64 ರನ್ ಸಿಡಿಸಿದ್ದ ಪ್ಲೆಸಿಸ್ರನ್ನು ಅಶ್ವಿನ್ ಔಟ್ ಮಾಡುವ ಮೂಲಕ ಹರಿಣಗಳಿಗೆ ಆಘಾತ ನೀಡಿದರು.