ಲಕ್ನೋ:ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ಥ್ ಲೂಯಿಸ್ ನಿಯಮದಡಿ 6 ರನ್ಗಳ ಅಂತರದ ಸೋಲು ಕಂಡಿದ್ದು, ಈ ಮೂಲಕ ಸರಣಿಯಲ್ಲಿ 1-2 ಅಂತರದ ಹಿನ್ನಡೆ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪೂನಂ ರಾವತ್ ಅವರ 77ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 5ವಿಕೆಟ್ ಕಳೆದುಕೊಂಡು 248ರನ್ಗಳಿಕೆ ಮಾಡಿತು. ಟೀಂ ಇಂಡಿಯಾ ಪರ ಸ್ಮೃತಿ ಮಂದಾನಾ 25ರನ್, ಮಿಥಾಲಿ ರಾಜ್ 36, ಹರ್ಮನ್ಪ್ರೀತ್ ಕೌರ್ 36 ಹಾಗೂ ದಿಫ್ತಿ ಶರ್ಮಾ ಅಜೇಯ 36ರನ್ಗಳಿಕೆ ಮಾಡಿದರು.
ಇದನ್ನೂ ಓದಿ: ಇಂದು ಸಂಜೆ ಭಾರತ-ಇಂಗ್ಲೆಂಡ್ ಟಿ-20 ಪಂದ್ಯ: ಶೇ.50ರಷ್ಟು ಜನರಿಗೆ ಮಾತ್ರ ವೀಕ್ಷಣೆ ಅವಕಾಶ