ಕೇಪ್ಟೌನ್:ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಶತಕ ಹಾಗೂ ಬವುಮಾರ 98 ರನ್ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದೆ.
ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 259 ರನ್ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 47.4 ಓವರ್ಗಳಲ್ಲಿ ತಲುಪಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿತು.
ನಾಯಕ ಡಿಕಾಕ್ 113 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 107 ಹಾಗೂ ಬವುಮಾ 103 ಎಸೆತಗಳಲ್ಲಿ 98 ರನ್ಗಳಿಸಿ ಗೆಲುವಿನ ರೂವಾರಿಗಳಾದರು. ಡಾಸ್ಸೆನ್ 38 ರನ್ಗಳಿಸಿ ಔಟಾಗದೆ ಉಳಿದರು.
ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ತಂಡಕ್ಕೆ ಜಾಸನ್ ರಾಯ್ (32) ಜೊ ಡೆನ್ಲಿ (87) ಹಾಗೂ ಕ್ರಿಸ್ ವೋಕ್ಸ್ (40 ) ರ ನೆರವಿನಿಂದ 259 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ಡೆನ್ಲಿ 103 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಸಿಡಿಸಿ ತಂಡದ ಗರಿಷ್ಠ ರನ್ ಸರ್ದಾರರಾದರು..
ಈ ಗೆಲುವಿನೊಂದಿಗೆ ದಕ್ಷಿಣಾ ಆಫ್ರಿಕಾ ತಂಡ 3 ಪಂದ್ಯಗಳ ಏಕದಿನ ಸರಣಿನ್ನು 1-0 ಯಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಪಂದ್ಯ ಫೆಬ್ರವರಿ 7 ರಂದು ಡರ್ಬನ್ನಲ್ಲಿ ನಡೆಯಲಿದೆ.