ಸೆಂಚುರಿಯನ್:ಸತತ ಸೋಲುಗಳಿಂದ ಕಂಗೆಟ್ಟಿದ್ದ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 107ರನ್ಗಳಿಂದ ಮಣಿಸಿ ಸರಣಿಯನ್ನು 1-0 ಯಲ್ಲಿ ಮುನ್ನಡೆ ಸಾಧಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 376 ರನ್ಗಳ ಟಾರ್ಗೆಟ್ ಬೆನ್ನೆತ್ತಿದ ಇಂಗ್ಲೆಂಡ್ ತಂಡ ರಬಾಡ(4 ವಿಕೆಟ್) ಹಾಗೂ ಎನ್ರಿಚ್ ನಾರ್ಟ್ಜ್(3) ದಾಳಿಗೆ ಸಿಲುಕಿ ನಾಲ್ಕನೇ ದಿನವೇ 268 ರನ್ಗಳಿಗೆ ಆಲೌಟ್ ಆಗುವ ಮೂಲಕ 107 ರನ್ಗಳ ಸೋಲುಕಂಡಿತು.
ಇಂಗ್ಲೆಂಡ್ ಪರ ರೋನಿ ಬರ್ನ್ಸ್ 84 ಏಕಾಂಗಿ ಹೋರಾಟ ನಡೆಸಿದರು ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ವಿಫಲರಾದರು. ನಾಯಕ ರೂಟ್ ಮಾತ್ರ 48 ರನ್ಗಳಿಸಿ ಬರ್ನ್ಸ್ಗೆ ಸಾತ್ ನೀಡಿದರಾದರು ಆಲ್ರೌಂಡರ್ ಎನ್ರಿಚ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು.
ಇವರಿಬ್ಬರನ್ನು ಹೊರೆತುಪಡಿಸಿದರೆ ಬೇರೆ ಬ್ಯಾಟ್ಸ್ಮನ್ಗಳಿಂದ ಉತ್ತಮ ಆಟ ಮೂಡಿಬರಲಿಲ್ಲ. ಡೊಮೆನಿಕ್ ಸಿಬ್ಲೇ 29, ಜೋ ಡೆನ್ಲಿ 31, ಬಟ್ಲರ್ 22 ರನ್, ಬೆನ್ಸ್ಟೋಕ್ಸ್ 14, ಬೈರ್ಸ್ಟೋವ್ 9 ಸ್ಯಾಮ್ ಕರ್ರನ್ 9 , ಆರ್ಚರ್ 4, ಬ್ರಾಡ್ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ 93 ಓವರ್ಗಳಲ್ಲಿ 268 ರನ್ಗಳಿಗೆ ಸರ್ವಪತನ ಕಂಡಿತು.
ಹರಿಣಗಳ ಪರ ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ರಬಾಡ 4 ವಿಕೆಟ್, ಎನ್ರಿಚ್ ನಾರ್ಟ್ಜ್ 3 ವಿಕೆಟ್, ಕೇಶವ್ ಮಹಾರಾಜ 2 ವಿಕೆಟ್ ಹಾಗೂ ಪ್ರಿಟೋರಿಯಸ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕು ಮುನ್ನ ಮೊದಲು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ ಡಿಕಾಕ್(95) ನೆರವಿನಿಂದ 284ರನ್ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ 181 ರನ್ಗಳಿಗೆ ಆಲೌಟ್ ಆಗುವ ಮೂಲಕ 103 ರನ್ಗಳ ಹಿನ್ನಡೆ ಅನುಭವಿಸಿತ್ತು. 103 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪ್ಲೆಸಿಸ್ ಪಡೆ 272 ರನ್ಗಳಿಸಿ ಇಗ್ಲೆಂಡ್ ತಂಡಕ್ಕೆ 376 ರನ್ಗಳ ಟಾರ್ಗೆಟ್ ನೀಡಿತ್ತು.
ದಕ್ಷಿಣ ಆಫ್ರಿಕಾ ಈ ಜಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಮೊದಲ ಇನ್ನಿಂಗ್ಸ್ನಲ್ಲಿ 95 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 34 ರನ್ಗಳಿಸಿ ಕ್ವಿಂಟನ್ ಡಿಕಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇತ್ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜನವರಿ 3 ರಿಂದ ಪೋರ್ಟ್ ಎಲಿಜನತ್ನಲ್ಲಿ ನಡೆಯಲಿದೆ.