ಪೊಚೆಫ್‌ಸ್ಟ್ರೂಮ್: ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯನ್ನು 3-0ಯಲ್ಲಿ ವೈಟ್ವಾಶ್ ಸಾಧನೆ ಮಾಡಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸತತ 2ನೇ ಬಾರಿ ಕ್ಲೀನ್ ಸ್ವೀಪ್ ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸತತ ಸರಣಿ ಸೋಲುಗಳಿಂದ ನಿರಾಶೆ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ಗೆಲುವಿನ ಹಳಿಗೆ ಮರಳಿದ್ದು, ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧವೇ ವೈಟ್ವಾಶ್ ಸಾಧನೆ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಮಾರ್ನಸ್ ಲಾಬುಶೇನ್(108) ಅವರ ಶತಕ ಹಾಗೂ ಡಾರ್ಸಿ ಶಾರ್ಟ್ (36), ಮಿಚೆಲ್ ಮಾರ್ಷ್ (32) ನೆರವಿನಿಂದ 254 ರನ್ಗಳಿಸಿತು.
ದಕ್ಷಿಣ ಆಫ್ರಿಕಾ ತಂಡದ ಪರ ಆ್ಯನ್ರಿಚ್ ನಾರ್ಟ್ಜ್ 2 ವಿಕೆಟ್, ಜೆಜೆ ಸ್ಮಟ್ಸ್ 2, ಪೆಹ್ಲುಕ್ವಾಯೋ ಹಾಗೂ ಡೇರಿನ್ ಡುಪವಿಲನ್ ತಲಾ ಒಂದು ವಿಕೆಟ್ ಪಡೆದು ಆಸ್ಟ್ರೇಲಿಯಾವನ್ನು ಹೆಚ್ಚು ರನ್ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.