ಪೋರ್ಟ್ ಎಲಿಜಬೆತ್:ದಕ್ಷಿಣ ಆಫ್ರಿಕಾ ಬೌಲರ್ಗಳ ಕಪಿಮುಷ್ಠಿಗೆ ಸಿಲುಕಿದ ಆಸ್ಟ್ರೇಲಿಯನ್ನರು 159 ರನ್ಗಳ ಟಾರ್ಗೆಟ್ ಬೆನ್ನತ್ತದೆ 12 ರನ್ಗಳ ಸೋಲು ಕಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ, ನಾಯಕ ಕ್ವಿಂಟನ್ ಡಿಕಾಕ್(70) ಅವರ ಭರ್ಜರಿ ಅರ್ಧಶತಕ ಹಾಗೂ ಡಾಸ್ಸೆನ್ 37 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 158ರನ್ಗಳಿಸಿತ್ತು.
ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 2, ಆ್ಯಡಂ ಜಂಪಾ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದಿದ್ದರು.
159 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದು ಮೊದಲ ವಿಕೆಟ್ಗೆ ವಾರ್ನರ್ ಹಾಗೂ ಫಿಂಚ್ 48 ರನ್ಗಳಿಸಿದರು. ಫಿಂಚ್ 14 ರನ್ಗಳಿಸಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಮಿತ್(29) ವಾರ್ನರ್ ಜೊತೆಗೂಡಿ 50 ರನ್ಗಳ ಜೊತೆಯಾಟ ನೀಡಿದರು.