ಕರ್ನಾಟಕ

karnataka

By

Published : Jun 13, 2020, 8:22 PM IST

ETV Bharat / sports

ಗಂಗೂಲಿ ಮಾತ್ರ ನನ್ನ ಬೌಲಿಂಗ್​ ಎದುರಿಸಿರುವ ಏಕೈಕ ಆರಂಭಿಕ ಆಟಗಾರ: ಅಖ್ತರ್​

ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಅವರನ್ನು ಹಾಡಿ ಹೊಗಳಿರುವ ಪಾಕ್​ ಮಾಜಿ ವೇಗಿ ಶೊಯೇಬ್​​ ಅಖ್ತರ್​​, ಹೊಸ ಚೆಂಡಿನೊಂದಿಗೆ ನಾನು ಕಣಕ್ಕಿಳಿದಾಗ ಅದರ ಸಾಮರ್ಥ್ಯ ಎದುರಿಸುವ ಶಕ್ತಿ ಅವರ ಬಳಿ ಮಾತ್ರ ಇತ್ತು ಎಂದಿದ್ದಾರೆ.

Sourav Ganguly
Sourav Ganguly

ಲಾಹೋರ್​:ಸೌರವ್ ಗಂಗೂಲಿ ಅವರಿಗಿಂತ ಉತ್ತಮ ನಾಯಕನನ್ನು ಭಾರತ ಇದುವರೆಗೆ ಕಂಡಿಲ್ಲ ಎಂದು ಹೇಳಿದ್ದ ಪಾಕ್​ ಮಾಜಿ ವೇಗಿ ಶೊಯೇಬ್ ಅಖ್ತರ್​ ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರನ್ನ ಹಾಡಿ ಹೊಗಳಿದ್ದಾರೆ.

ಹೊಸ ಬಾಲ್​​ನೊಂದಿಗೆ ನಾನು ಬೌಲಿಂಗ್​ ಮಾಡಲು ಕಣಕ್ಕಿಳಿದಾಗ ಸೌರವ್​ ಗಂಗೂಲಿ ಮಾತ್ರ ಆರಂಭಿಕರಾಗಿ ನನ್ನ ಬೌಲಿಂಗ್​ ಶಕ್ತಿ ಎದುರಿಸುವ ಸಾಮರ್ಥ್ಯ ಹೊಂದಿದ್ದರು ಎಂದು ರಾವಲ್ಪಿಂಡಿ ಎಕ್ಸ್​ಪ್ರೆಸ್​ ಹೇಳಿಕೆ ನೀಡಿದ್ದಾರೆ.

ಪಾಕ್​ ಮಾಜಿ ವೇಗದ ಬೌಲರ್​ ಅಖ್ತರ್

ಗಂಗೂಲಿ ನನ್ನ ಬೌಲಿಂಗ್​ ಶಕ್ತಿ ಎದುರಿಸಲು ಹೆದರುತ್ತಿದ್ದರು ಎಂದು ಅನೇಕರು ಹೇಳಿಕೊಂಡಿದರು. ಆದರೆ ಅದು ಸುಳ್ಳು. ನನ್ನ ಬೌಲಿಂಗ್​ ಎದುರಿಸುವಲ್ಲಿ ಗಂಗೂಲಿ ಅತ್ಯಂತ ಧೈರ್ಯಶಾಲಿ ಬ್ಯಾಟ್ಸ್​ಮನ್​. ಹೊಸ ಚೆಂಡಿನೊಂದಿಗೆ ಅವರು ನನ್ನನ್ನು ಸುಲಭವಾಗಿ ಎದುರಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಸೌರವ್​ ಗಂಗೂಲಿ

ಮೈದಾನದಲ್ಲಿ ನಾನು ಅವರ ಎದೆಯ ಮೇಲೆ ಬೌಲಿಂಗ್​ ಮಾಡುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಎಂದಿಗೂ ಹಿಂದೆ ಸರಿಯುತ್ತಿರಲಿಲ್ಲ. ಸುಲಭವಾಗಿ ರನ್​ ಗಳಿಸುತ್ತಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಗಂಗೂಲಿ 113 ಟೆಸ್ಟ್​​, 311 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 7,212 ಹಾಗೂ 11,363 ರನ್ ​ಗಳಿಸಿದ್ದಾರೆ. ಇನ್ನು ಶೊಯೇಬ್ ಅಖ್ತರ್ 46 ಟೆಸ್ಟ್, 163 ಏಕದಿನ, ಮತ್ತು 15 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 178, 247 ಮತ್ತು 19 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details