ಕೋಲ್ಕತ್ತಾ: ವಿಶ್ವಕಪ್ ಟೂರ್ನ್ಮೆಂಟ್ಗೆ ಕೆಲವೇ ತಿಂಗಳು ಬಾಕಿ ಇದ್ದು ಪ್ರತಿಯೊಂದು ತಂಡಗಳು ಆಟಗಾರರ ಆಯ್ಕೆ ಬಗ್ಗೆ ಗಮನ ಹರಿಸುತ್ತಿವೆ. ಈಗಾಗ್ಲೆ ಟೀಂ ಇಂಡಿಯಾ ಕೂಡ ಆಟಗಾರರ ಆಯ್ಕೆಯಲ್ಲಿ ತೊಡಗಿದ್ದು, ಅದಕ್ಕಾಗಿ ಅಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕೆಲವರನ್ನು ಆಯ್ಕೆ ಮಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಯುವ ಆಟಗಾರ ರಿಷಭ್ ಪಂತ್ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದಾರೆ. ರಿಷಭ್ಗೆ ಖಂಡಿತವಾಗಿಯೂ ಭವಿಷ್ಯದಲ್ಲಿ ಭಾರತ ತಂಡದ ಉತ್ತಮ ಆಟಗಾರನಾಗುವ ಸಾಮರ್ಥ್ಯ ಇದೆ. ಆದರೆ, ಕೇವಲ ಮೂರು ಏಕದಿನ ಪಂದ್ಯ ಆಡಿರುವ ಪಂತ್ ಹೇಗೆ ವಿಶ್ವಕಪ್ ತಂಡಕ್ಕೆ ಫಿಟ್ ಆಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.