ಕರ್ನಾಟಕ

karnataka

ETV Bharat / sports

ಗಂಗೂಲಿಗೆ ಕೊರೊನರಿ ಆಂಜಿಯೋಗ್ರಫಿ, ಸ್ಟಂಟ್ ಅಳವಡಿಕೆ: ಆಸ್ಪತ್ರೆಯಿಂದ ಮಾಹಿತಿ

ಸೌರವ್ ಗಂಗೂಲಿ ಅವರ ಮುಖ ರಕ್ತನಾಳಗಳಿಗೆ ತೊಂದರೆ ಇರುವ ಕಾರಣ ರಿವಾಸ್ಕ್ಯೂಲರೈಸೇಶನ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Sourav Ganguly
ಸೌರವ್ ಗಂಗೂಲಿ

By

Published : Jan 4, 2021, 7:05 AM IST

ಕೋಲ್ಕತ್ತಾ: ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾನುವಾರ ಮಧ್ಯಾಹ್ನ ವುಡ್‌ಲ್ಯಾಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನರಿ ಆಂಜಿಯೋಗ್ರಫಿಗೆ ಒಳಗಾಗಿದ್ದಾರೆ.

"ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೊರೊನರಿ ಆಂಜಿಯೋಗ್ರಫಿ ಮಾಡಲಾಯಿತು. ಟ್ರಿಪಲ್ ವೆಸಲ್​ ಡಿಸೀಸ್ ಪಿಟಿಸಿಎ (ಪೆರ್ಕ್ಯುಟೇನಿಯಸ್ ಟ್ರಾನ್ಸ್‌ಲ್ಯುಮಿನಲ್ ಕೊರೊನರಿ ಆಂಜಿಯೋಪ್ಲ್ಯಾಸ್ಟಿ) ಮತ್ತು ರೇಡಿಯಲ್ ಮಾರ್ಗದ ಮೂಲಕ ಆರ್‌ಸಿಎ ಅಥವಾ ಅಪಧಮನಿಗಳಿಗೆ ಸ್ಟಂಟಿಂಗ್ ಮಾಡಲಾಗಿದೆ" ಎಂದು ಆಸ್ಪತ್ರೆಯ ಬುಲೆಟಿನ್​ನಲ್ಲಿ ಹೇಳಲಾಗಿದೆ.

ಅಲ್ಲದೇ ಪ್ರಮುಖ ರಕ್ತನಾಳಗಳಿಗೆ ತೊಂದರೆ ಇರುವ ಕಾರಣ ರಿವಾಸ್ಕ್ಯೂಲರೈಸೇಶನ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಭಾನುವಾರ ರಾತ್ರಿ 10 ಗಂಟೆಗೆ ಅನ್ನ, ದಾಲ್, ತರಕಾರಿಗಳು ಮತ್ತು ಕಸ್ಟರ್ಡ್ ಒಳಗೊಂಡಿರುವ ಆಹಾರ ಸೇವನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಶನಿವಾರ ಮಧ್ಯಾಹ್ನ ಹೃದಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.

ABOUT THE AUTHOR

...view details