ಹೈದರಾಬಾದ್: ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಘೋಷಣೆಯಾಗಿ ಮೂರು ದಿನ ಕಳೆದಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ಕೇದಾರ್ ಯಾಕೆ? ಶುಬ್ಮನ್ ಗಿಲ್ ಯಾಕಿಲ್ಲ? ಆಯ್ಕೆ ಸಮಿತಿ ವಿರುದ್ದ ಗರಂ ಆದ ಫ್ಯಾನ್ಸ್
ಉದಯೋನ್ಮುಖ ಆಟಗಾರ ಶುಬ್ಮನ್ ಗಿಲ್ ಹಾಗೂ ಅಜಿಂಕ್ಯ ರಹಾನೆಯನ್ನು ವಿಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸಿದೆ ಎಂದು ದಾದಾ ಟ್ವೀಟ್ ಮಾಡಿದ್ದಾರೆ.
ತಂಡದಲ್ಲಿರುವ ಹಲವರು ಎಲ್ಲ ಮಾದರಿ ಕ್ರಿಕೆಟ್ ಆಡುವ ಪರಿಣತಿ ಹೊಂದಿದ್ದಾರೆ. ಆದರೆ ಶುಬ್ಮನ್ ಗಿಲ್ ಹಾಗೂ ಅಜಿಂಕ್ಯ ರಹಾನೆಯನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಿದಿರುವುದು ಅಚ್ಚರಿ ಮೂಡಿಸಿದೆ ಎಂದು ಗಂಗೂಲಿ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಯ್ಕೆ ಸಮಿತಿಯಿಂದ ದ್ರಾವಿಡ್ ಶಿಷ್ಯನ ಕಡೆಗಣನೆ... ಬೇಸರ ಹೊರಹಾಕಿದ ಗಿಲ್..!
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾದ ವಿಂಡೀಸ್ ಪ್ರವಾಸ ಆಗಸ್ಟ್ 3ರಂದು ಆರಂಭವಾಗಲಿದೆ. ಕೆರಿಬಿಯನ್ನರ ನಾಡಿನಲ್ಲಿ ಮೂರು ಟಿ-20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯವನ್ನಾಡಲಿದೆ.