ಮುಂಬೈ:ಭಾರತ ಕ್ರಿಕೆಟ್ ತಂಡದ ಲೆಜೆಂಡ್ ಕ್ರಿಕೆಟರ್ ಧೋನಿ ನಿವೃತ್ತಿ ಬಗ್ಗೆ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಧೋನಿ ಜನವರಿಯವರೆಗೆ ನಿವೃತ್ತಿ ಬಗ್ಗೆ ಕೇಳಬೇಡಿ ಎಂದರೆ, ಗಂಗೂಲಿ ಕೂಡ ಅದೇ ಉತ್ತರ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಧೋನಿ ಭವಿಷ್ಯ 2020ರ ಐಪಿಎಲ್ ನಂತರ ನಿರ್ಧಾರವಾಗಲಿದೆ ಎಂದು ರವಿ ಶಾಸ್ತ್ರಿ ಹೇಳಿಕೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ಕೇಳಿದಾಗ ಗಂಗೂಲಿ, ಎಂ.ಎಸ್.ಧೋನಿ ಭವಿಷ್ಯ ಈಗಾಗಲೇ ನಿರ್ಧಾರವಾಗಿದೆ. ನಮಗೆ ಸಂಪೂರ್ಣ ಸ್ಪಷ್ಟತೆ ಇದೆ. ಆದರೆ, ಅದನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ. ಮೂರು ತಿಂಗಳ ನಂತರ ನಿಮಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.