ಕರ್ನಾಟಕ

karnataka

ETV Bharat / sports

ಈ ಐವರನ್ನು ಗಂಗೂಲಿ ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ಇಷ್ಟಪಡ್ತಾರಂತೆ!

ದಾದಾ ನಾಯಕತ್ವದಲ್ಲಿ ಸಚಿನ್ ತಂಡೂಲ್ಕರ್​, ರಾಹುಲ್​ ದ್ರಾವಿಡ್​, ಸೆಹ್ವಾಗ್​, ವಿ.ವಿ.ಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್, ಜಾವಗಲ್​ ಶ್ರೀನಾಥ್​, ಅನಿಲ್​ ಕುಂಬ್ಳೆ ಹಾಗೂ ಜಹೀರ್ ಖಾನ್​ರಂತಹ ಆಟಗಾರರನ್ನು ಟೀಮ್​ ಇಂಡಿಯಾ ಒಳಗೊಂಡಿತ್ತು. ಆಗಿನ ಸಂದರ್ಭದಲ್ಲಿ ಅದೊಂದು ಎಲ್ಲಾ ವಿಭಾಗದಲ್ಲೂ ಸಮತೋಲನದ ತಂಡವಾಗಿತ್ತು.

ಸೌರವ್​ ಗಂಗೂಲಿ
ಟೀಮ್​ ಇಂಡೀಯಾ

By

Published : Jul 8, 2020, 5:26 PM IST

ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಪ್ರಸ್ತುತ ಭಾರತ ತಂಡದ ಐವರು ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ಬಯಸಿರುವುದಾಗಿ ಬಿಸಿಸಿಐ ಪೇಜ್​ನಲ್ಲಿ ಮಯಾಂಕ್​ ಅಗರ್​ವಾಲ್​ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ನಾಯಕರಲ್ಲಿ ಗಂಗೂಲಿ ಒಬ್ಬರು. ಇವರ ನಾಯಕತ್ವದಲ್ಲೇ ಭಾರತೀಯ ಕ್ರಿಕೆಟ್ ತಂಡ ವಿದೇಶದಲ್ಲಿ ಟೆಸ್ಟ್​ ಪಂದ್ಯಗಳನ್ನು ಗೆಲ್ಲುವ ಅಭಿಯಾನ ಶುರುವಿಟ್ಟುಕೊಂಡಿತ್ತು. 2000ರಲ್ಲಿ ಭಾರತೀಯ ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಸಿಲುಕಿ ನಲುಗುತ್ತಿದ್ದ ವೇಳೆ ತಂಡದ ಚುಕ್ಕಾಣಿ ಹಿಡಿದ ದಾದಾ, ಭಾರತ ತಂಡ ಶಕ್ತಿ ಹೆಚ್ಚಿಸಿದ್ದರು.

ಮಯಾಂಕ್ ತನ್ನ ತಂಡದಲ್ಲಿ ಬೇಡ ಎಂದು ಗಂಗೂಲಿ ಹೇಳಿದ್ದೇಕೆ?

ಮಯಾಂಕ್​ ಅಗರ್​ವಾಲ್​ ಸಂದರ್ಶನದ ವೇಳೆ ಪ್ರಸ್ತುತ ಭಾರತ ತಂಡದಲ್ಲಿ ಯಾವ 5 ಆಟಗಾರರನ್ನು ನೀವು ನಿಮ್ಮ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವಿರಿ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, "ಇದು ಕಠಿಣವಾದ ಪ್ರಶ್ನೆ. ಎಲ್ಲಾ ಜನರೇಶನ್‌ನಲ್ಲಿ​ ಆಟಗಾರರು ವಿಭಿನ್ನವಾಗಿರುತ್ತಾರೆ. ಈಗಿರುವ ನಿಮ್ಮ ತಂಡದಲ್ಲಿ ನಾನು ವಿರಾಟ್​ ಕೊಹ್ಲಿ ಹಾಗೂ ರೋಹಿತ್​ರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆ ನಿಮ್ಮನ್ನು(ಮಯಾಂಕ್​) ಆಯ್ಕೆ ಮಾಡಿಕೊಳ್ಳುವುದಿಲ್ಲ!

ಏಕೆಂದರೆ, ನಮ್ಮ ಬಳಿ ಸೆಹ್ವಾಗ್​ ಇದ್ದಾರೆ. ನಾನು ಬುಮ್ರಾರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ, ಅವರ ಜೊತೆಗೆ ಜಹೀರ್​ ಇರಲಿದ್ದಾರೆ. ಶಮಿಯನ್ನು ಜಾವಗಲ್​ ಶ್ರೀನಾಥ್​ರ ನಿವೃತ್ತಿಯ ನಂತರ ಆಯ್ಕೆ ಮಾಡಿಕೊಳ್ಳುತ್ತೇನೆ. ಸ್ಪಿನ್ನರ್​ ವಿಭಾಗದಲ್ಲಿ ಅನಿಲ್​, ಭಜ್ಜಿ ನನ್ನ ತಂಡದಲ್ಲಿದ್ದಾರೆ. ಹಾಗಾಗಿ, ಮೂರನೇ ಸ್ಪಿನ್ನರ್​ ಆಗಿ ಅಶ್ವಿನ್‌ರನ್ನು ತೆಗೆದುಕೊಳ್ಳುತ್ತೇನೆ. ಇನ್ನು ರವೀಂದ್ರ ಜಡೇಜಾರನ್ನು ಹೊಂದಲು ಕೂಡ ಆಸೆ ಪಡುತ್ತೇನೆ ಎಂದಿದ್ದಾರೆ.

ABOUT THE AUTHOR

...view details