ಕರ್ನಾಟಕ

karnataka

ETV Bharat / sports

ಆಸೀಸ್​ ವಿರುದ್ಧ ಮುಂದಿನ ಪಂದ್ಯಗಳಲ್ಲಿ ಸಿಡಿದೇಳುತ್ತೆ ಟೀಂ​ ಇಂಡಿಯಾ: ದಾದಾ ವಿಶ್ವಾಸ - ಭಾರತಕ್ಕೆ ಏಕದಿನ ಸರಣಿ- ಗಂಗೂಲಿ

ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧದ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಸೋಲು ಕಾಣುವ ಮೂಲಕ ಸರಣಿಯಲ್ಲಿ 1-0ಯಲ್ಲಿ ಹಿನ್ನಡೆ ಅನುಭವಿಸಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಭಾರತ ಸರಣಿಯನ್ನು 2-1ರಲ್ಲಿ ಗೆಲ್ಲಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Sourav ganguly feels Team india won next two ODIs
Sourav ganguly feels Team india won next two ODIs

By

Published : Jan 15, 2020, 7:55 PM IST

Updated : Jan 15, 2020, 8:04 PM IST

ಮುಂಬೈ: ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧದ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಸೋಲು ಕಾಣುವ ಮೂಲಕ ಸರಣಿಯಲ್ಲಿ 1-0ಯಲ್ಲಿ ಹಿನ್ನಡೆ ಅನುಭವಿಸಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಭಾರತ ಸರಣಿಯನ್ನು 2-1ರಲ್ಲಿ ಗೆಲ್ಲಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

" ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ನಮ್ಮ ಆಟಗಾರರು ಸಿಡಿದೇಳಲಿದ್ದಾರೆ. ಈಗಿರುವ ಭಾರತ ತಂಡ ಬಲಿಷ್ಠವಾಗಿದೆ. ಸೋಲನುಭವಿಸಿದ ಆ ದಿನ ಕಛೇರಿಯಲ್ಲಿ ಕಳೆದ ಕೆಟ್ಟ ದಿನಗಳಲ್ಲೊಂದು, ಎರಡು ಆವೃತ್ತಿಗಳ ಹಿಂದೆ ಇದೇ ರೀತಿಯ ಸನ್ನಿವೇಶದಲ್ಲಿದ್ದಾಗ, ಭಾರತ ತಂಡ ತಿರುಗಿ ಬಿದ್ದು ಎರಡು ಪಂದ್ಯಗಳನ್ನು ಗೆದ್ದಿತ್ತು .ಕೊಹ್ಲಿ ಹಾಗೂ ತಂಡಕ್ಕೆ ಒಳ್ಳೆಯದಾಗಲಿ" ಎಂದು ದಾದಾ ಟ್ವೀಟ್​ ಮಾಡುವ ಮೂಲಕ ಟೀಂ ಇಂಡಿಯಾಗೆ ಧೈರ್ಯ ತುಂಬಿದ್ದಾರೆ.

2013ರಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಂಡಿದ್ದಾಗ 7 ಪಂದ್ಯಗಳ ಸರಣಿಯನ್ನು ಆಸೀಸ್​ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ನಂತರ 2 ಪಂದ್ಯಗಳು ರದ್ದಾಗಿದ್ದವು, ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿ ಗೆದ್ದಿತ್ತು.

ಇನ್ನು ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗಲೂ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಆದರೆ ನಂತರದ ಎರಡು ಪಂದ್ಯಗಳಲ್ಲಿ ತಿರುಗಿ ಬಿದ್ದು ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸೀಸ್​ ಬೌಲಿಂಗ್​ ದಾಳಿಗೆ ಕುಸಿದ ಭಾರತ ತಂಡ 255 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ವಿಕೆಟ್​ ನಷ್ಟವಿಲ್ಲದೆ ಫಿಂಚ್​-ವಾರ್ನರ್​ ಶತಕಗಳ ನೆರವಿನಿಂದ ಗೆಲುವಿ ಸಾಧಿಸಿತ್ತು.

Last Updated : Jan 15, 2020, 8:04 PM IST

ABOUT THE AUTHOR

...view details