ಕರ್ನಾಟಕ

karnataka

ETV Bharat / sports

ಯುವ ಪ್ರತಿಭೆಗಳಿಗೆ ಸ್ಥಿರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ: ದಾದಾ ಪ್ರತಿಪಾದನೆ - ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

ಸ್ಥಿರವಾದ ಅವಕಾಶಗಳನ್ನು ನೀಡಿದಾಗ ದೇಶಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಸೌರವ್ ಗಂಗೂಲಿ

By

Published : Sep 18, 2019, 12:43 PM IST

ನವದೆಹಲಿ: ಯುವ ಪ್ರತಿಭೆಗಳು ತಮ್ಮ ಆತ್ಮಸ್ಥೈರ್ಯ ತೋರಿಸಲು ಕನಿಷ್ಠ ಐದು ಪಂದ್ಯಗಳ ಅವಕಾಶಬೇಕು ಎಂಬುದು ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಮತವಾದರೆ, ಇದಕ್ಕೆ ಭಿನ್ನವಾದ ಅಭಿಪ್ರಾಯ ಮಾಜಿ ನಾಯಕ ಸೌರವ್​ ಗಂಗೂಲಿ ಅವರದ್ದಾಗಿದೆ.

ಸ್ಥಿರವಾದ ಅವಕಾಶಗಳನ್ನು ನೀಡಿದಾಗ ದೇಶಕ್ಕೆ ಅತ್ಯುತ್ತಮವಾದ ಪ್ರತಿಭೆಗಳನ್ನು ನೀಡಲು ಸಾಧ್ಯವಾಗುತ್ತದೆ. ಸದ್ಯ ನಡೆಯುತ್ತಿರುವ ಟಿ-20 ಪಂದ್ಯಗಳ ಬಗ್ಗೆ ಅಷ್ಟೊಂದು ಹೈಪ್​ ಮಾಡುವ ಅಗತ್ಯವಿಲ್ಲ. ಆದರೆ, ಮುಂಬರುವ 2020ರ ಟಿ -20 ವಿಶ್ವಕಪ್​​ಗೆ ಪೂರ್ವ ತಯಾರಿ ಪಂದ್ಯಗಳಂತೆ ನೋಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಮುಂದುವರಿದು ಮಾತನಾಡಿರುವ ಅವರು ಮುಂಬರುವ ಟಿ-20 ವಿಶ್ವಕಪ್​ಗೆ ಮಾತ್ರವೇ ಪ್ರಾಮುಖ್ಯತೆ ನೀಡುವುದು ಬೇಡ. ಕಳೆದ ವಿಶ್ವಕಪ್​ಗೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಯಿತು. ಒಮ್ಮೊಮ್ಮೆ ಹೆಚ್ಚೆಚ್ಚು ಶಬ್ಧ ಮಾಡುವುದು ಒಳ್ಳೆಯದಲ್ಲ ಎಂದಿರುವ ಗಂಗೂಲಿ, ​ಭಾರತ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಸ್ಥಿರ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಖಲೀಲ್​ ಅಹಮ್ಮದ್​, ದೀಪಕ್​ ಚಹರ್​​, ನವದೀಪ್​ ಸೈನಿ ಅತ್ಯುತ್ತಮ ಪ್ರತಿಭೆಗಳಾಗಿದ್ದಾರೆ. ಇವರನ್ನೆಲ್ಲ ಜಸ್ಪ್ರೀತ್​ ಬುಮ್ರಾ ಹಾದಿಯಲ್ಲಿ ತಯಾರು ಮಾಡಬೇಕಾಗಿದೆ ಎಂದಿದ್ದಾರೆ.

ABOUT THE AUTHOR

...view details