ಕರ್ನಾಟಕ

karnataka

ETV Bharat / sports

ವೆಲಾಸಿಟಿ ವಿರುದ್ಧ ಟ್ರೈಲ್​ಬ್ಲೇಜರ್ಸ್​ಗೆ 9 ವಿಕೆಟ್​ಗಳ ಭರ್ಜರಿ ಜಯ - ಜೂಲನ್ ಗೋಸ್ವಾಮಿ

ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ್ದ ಮಿಥಾಲಿ ರಾಜ್​ ನೇತೃತ್ವದ ವೆಲಾಸಿಟಿ 15.1 ಓವರ್​ಗಳಲ್ಲಿ ಕೇವಲ 47 ರನ್​ಗಳಿಗೆ ಆಲೌಟ್ ಅಗಿತ್ತು. ಈ ಸಣ್ಣ ಮೊತ್ತವನ್ನು ಟ್ರೈಲ್​ಬ್ಲೇಜರ್ಸ್ ತಂಡ ಕೇವಲ 7.5 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪಿತು.

ವೆಲಾಸಿಟಿ ವಿರುದ್ಧ ಟ್ರೈಲ್​ಬ್ಲೇಜರ್ಸ್​ಗೆ 9 ವಿಕೆಟ್​ಗಳ ಭರ್ಜರಿ ಜಯ
ವೆಲಾಸಿಟಿ ವಿರುದ್ಧ ಟ್ರೈಲ್​ಬ್ಲೇಜರ್ಸ್​ಗೆ 9 ವಿಕೆಟ್​ಗಳ ಭರ್ಜರಿ ಜಯ

By

Published : Nov 5, 2020, 6:21 PM IST

ಶಾರ್ಜಾ: ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಸ್ಮೃತಿ ಮಂಧಾನ ನೇತೃತ್ವದ ಟ್ರೈಲ್​ಬ್ಲೇಜರ್ಸ್​ ತಂಡ ವೆಲಾಸಿಟಿ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ್ದ ಮಿಥಾಲಿ ರಾಜ್​ ನೇತೃತ್ವದ ವೆಲಾಸಿಟಿ 15.1 ಓವರ್​ಗಳಲ್ಲಿ ಕೇವಲ 47 ರನ್​ಗಳಿಗೆ ಆಲೌಟ್ ಅಗಿತ್ತು. ಈ ಸಣ್ಣ ಮೊತ್ತವನ್ನು ಟ್ರೈಲ್​ಬ್ಲೇಜರ್ಸ್ ತಂಡ ಕೇವಲ 7.5 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪಿತು.

ಆರಂಭಿಕ ಬ್ಯಾಟರ್​ ಸ್ಮೃತಿ ಮಂಧಾನ (6) ವಿಕೆಟ್​ ಬೇಗ ಕಳೆದುಕೊಂಡರು. ವಿಂಡೀಸ್ ಸ್ಟಾರ್​ ದಿಯಾಂಡ್ರ ದೊಟ್ಟಿನ್​ ಔಟಾಗದೆ 29 ಮತ್ತು ರಿಚಾ ಘೋಷ್ ಔಟಾಗದೆ13 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕು ಮೊದಲು ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಟ್ರೈಲ್ ಬ್ಲೇಜರ್ಸ್ ತಂಡ ವೆಲಾಸಿಟಿಯನ್ನು ಕೇವಲ 47 ರನ್​ಗಳಿಗೆ ಕಟ್ಟಿಹಾಕಿತ್ತು. ಅನುಭವಿ ಜೂಲನ್ ಗೋಸ್ವಾಮಿ 2 ವಿಕೆಟ್, ಸ್ಪಿನ್ನರ್​ಗಳಾದ ಸಫೀ ಎಕ್ಲೆಸ್ಟೋನ್ 9ಕ್ಕೆ 4 ಹಾಗೂ ಗಾಯಕ್ವಾಡ್​ 13ಕ್ಕೆ 2 ವಿಕೆಟ್ ಪಡೆದು ಮಿಂಚಿದ್ದರು.

ABOUT THE AUTHOR

...view details