ಶಾರ್ಜಾ: ವುಮೆನ್ಸ್ ಟಿ20 ಚಾಲೆಂಜ್ನ 2ನೇ ಪಂದ್ಯದಲ್ಲಿ ಟ್ರೈಲ್ಬ್ಲೇಜರ್ಸ್ ತಂಡದ ಬಿರುಗಾಳಿ ಬೌಲಿಂಗ್ ದಾಳಿಗೆ ತತ್ತರಿಸಿದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಕೇವಲ 47 ರನ್ಗಳಿಗೆ ಸರ್ವಫತನ ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಲಾಸಿಟಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ನಿರಂತರ ವಿಕೆಟ್ ಕಳೆದುಕೊಂಡರಲ್ಲದೆ 15.1 ಓವರ್ಗಳಲ್ಲಿ ಕೇವಲ 47 ರನ್ಗಳಿಗೆ ಆಲೌಟ್ ಆಗಿದೆ.
ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ 13 ರನ್ಗಳಿಸಿದ್ದೇ ವೆಲಾಸಿಟಿ ತಂಡದ ಗರಿಷ್ಠ ಸ್ಕೋರ್ ಆಯಿತು. ಇವರನ್ನು ಬಿಟ್ಟರೆ ಲೀ ಕಾಸ್ಪೆರಕ್ 11, ಶಿಖಾ ಪಾಂಡೆ 10 ರನ್ಗಳಿಸಿ ಎರಡಂಕಿ ಮೊತ್ತ ದಾಟಿದ ಬ್ಯಾಟರ್ಗಳಾದರು. ಉಳಿದಂತೆ ನಾಯಕಿ ಮಿಥಾಲಿ, 1, ಡೇನಿಯಲ್ ವ್ಯಾಟ್ 3, ವೇದಾ 1, ಸುನೆ ಲೂಸ್ 4, ದಿಬ್ಯಾದರ್ಶಿನಿ 0, ಏಕ್ತಾ ಬಿಷ್ತ್ 0 ಹಾಗೂ ಜಹನಾರ ಆಲಮ್ 1 ರನ್ಗೆ ವಿಕೆಟ್ ಒಪ್ಪಿಸಿದರು.
ಅದ್ಭುತ ಬೌಲಂಗ್ ಪ್ರದರ್ಶನ ತೋರಿದ ಸೋಫಿ ಎಕ್ಲೆಸ್ಟೋನ್ 9 ರನ್ ನೀಡಿ 4 ವಿಕೆಟ್ ಹುರುಳಿಸಿದರು. ಇವರಿಗೆ ಸೂಕ್ತ ಬೆಂಬಲ ನೀಡಿದ ಗೋಸ್ವಾಮಿ 13ಕ್ಕೆ 2, ಗಾಯಕ್ವಾಡ್ 13ಕ್ಕೆ 2 ಹಾಗೂ ದೀಪ್ತಿ ಶರ್ಮಾ 8ಕ್ಕೆ 1 ವಿಕೆಟ್ ಪಡೆದು ಮಿಂಚಿದರು.