ಡ್ಯುನೇಡಿನ್(ನ್ಯೂಜಿಲ್ಯಾಂಡ್): ಮಹಿಳಾ ಸೂಪರ್ ಸ್ಮ್ಯಾಸ್ ಟಿ-20 ಟೂರ್ನಿಯಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ವೇಗದ ಶತಕ ದಾಖಲಿಸಿದ ಕಿವೀಸ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಪಂದ್ಯದ ವೇಳೆ ಮಾನವೀಯತೆ ಮೆರೆದಿದ್ದಾರೆ.
ಗುರುವಾರ ಮಹಿಳೆಯರ ಸೂಪರ್ಸ್ಮ್ಯಾಶ್ ಕ್ರಿಕೆಟ್ ಟೂರ್ನಿಯಲ್ಲಿ ಒಟಾಗೊ ವುಮೆನ್ಸ್ ತಂಡದ ವಿರುದ್ಧ 38 ಎಸೆತಗಳಲ್ಲಿ ಅಜೇಯ 108 ರನ್ಗಳಿಸಿದ ವೆಲ್ಲಿಂಗ್ಟನ್ ಬ್ಯಾಟರ್ ಕೇವಲ 36 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು.
36ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ದಾಖಲೆಯ ಶತಕ ಸಿಡಿಸಿದ್ರು. ಆದರೆ, ಆ ಚೆಂಡು ಪಂದ್ಯ ನೋಡುತ್ತಿದ್ದ ಓರ್ವ ಪುಟ್ಟ ಬಾಲಕಿಯ ಕೆನ್ನೆಗೆ ಬಡಿಯಿತು. ಇದರಿಂದ ಗಾಬರಿಗೊಂಡ ಡಿವೈನ್ ಶತಕವನ್ನೂ ಸಂಭ್ರಮಿಸಿದೆ ಕೆಲ ಕಾಲ ಕ್ರೀಸ್ನಲ್ಲೆ ಕುಳಿತುಕೊಂಡು, ಬೌಂಡರಿ ಬಳಿ ತೆರಳಿ ಬಾಲಕಿ ಮತ್ತು ಆಕೆಯ ತಾಯಿ ಜೊತೆ ಮಾತನಾಡಿ ಯೋಗ ಕ್ಷೇಮ ವಿಚಾರಿಸಿ ಪಂದ್ಯ ಮುಂದುವರೆಸಿದ್ರು.
ಅಲ್ಲದೇ ಪಂದ್ಯ ಮುಗಿದ ಬಳಿಕ ಕೂಡ ಸೋಫಿ ಡಿವೈನ್, ಬಾಲಕಿ ಜೊತೆಯಲ್ಲಿ ಆಟವಾಡುವ ಮತ್ತು ಫೋಟೋ ತೆಗೆಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.
ಡಿವೈನ್ ಸ್ಫೋಟಕ ಶತಕದಿಂದ ಒಟಾಗೋ ನೀಡಿದ 129 ರನ್ಗಳ ಟಾರ್ಗೆಟ್ ಅನ್ನು ವೆಲ್ಲಿಂಗ್ಟನ್ ಬ್ಲೇಝ್ ಯಾವುದೇ ವಿಕೆಟ್ ನಷ್ಟವಿಲ್ಲದೇ 8.4 ಓವರ್ಗಳಲ್ಲಿ ತಲುಪಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.