ಡ್ಯುನೇಡಿನ್(ನ್ಯೂಜಿಲ್ಯಾಂಡ್):ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಮಹಿಳಾ ಸೂಪರ್ ಸ್ಮ್ಯಾಸ್ ಟಿ20 ಟೂರ್ನಿಯಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ವೇಗದ ಶತಕ ದಾಖಲಿಸಿದ್ದಾರೆ.
14 ದಿನಗಳ ಕ್ವಾರಂಟೈನ್ ಮುಗಿಸಿದ 4 ದಿನಗಳಲ್ಲಿ ಸೋಫಿ ಡಿವೈನ್ ಈ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಗುರುವಾರ ಮಹಿಳೆಯರ ಸೂಪರ್ಸ್ಮ್ಯಾಶ್ ಕ್ರಿಕೆಟ್ ಟೂರ್ನಿಯಲ್ಲಿ ಒಟಾಗೊ ವುಮೆನ್ಸ್ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದರು. 38 ಎಸೆತಗಳಲ್ಲಿ ಅಜೇಯ 108 ರನ್ಗಳಿಸಿದ ವೆಲ್ಲಿಂಗ್ಟನ್ ಬ್ಯಾಟರ್ ಕೇವಲ 36 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಒಟ್ಟಾರೆ ಇವರ ಇನ್ನಿಂಗ್ಸ್ನಲ್ಲಿ 9 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿ ಸೇರಿದ್ದವು.