ಕರ್ನಾಟಕ

karnataka

ETV Bharat / sports

ಐಪಿಎಲ್​​ಗಿಂತಲೂ ಇತರ ಲೀಗ್​ಗಳಲ್ಲಿ ಆಡುವುದು ಹೆಚ್ಚು ಲಾಭದಾಯಕ: ಡೇಲ್ ಸ್ಟೇನ್‌ - ಸ್ಟೇನ್​ ಪಾಕಿಸ್ತಾನ ಯೂಟ್ಯೂಬ್​ ಚಾನೆಲ್

ಇಂಡಿಯನ್​ ಪ್ರೀಮಿಯರ್ ಲೀಗ್​ನಿಂದ ಹೊರಗುಳಿದಿರುವ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್​ ಇದೀಗ ಈ ಟೂರ್ನಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ.

South Africa pacer Dale Steyn
South Africa pacer Dale Steyn

By

Published : Mar 2, 2021, 4:59 PM IST

ಹೈದರಾಬಾದ್​: ಇಂಡಿಯನ್ ಪ್ರೀಮಿಯರ್ ಲೀಗ್​ಗಿಂತಲೂ ಇತರೆ ಟಿ-20 ಲೀಗ್​ಗಳಲ್ಲಿ ಆಡುವುದು ಹೆಚ್ಚು ಲಾಭದಾಯಕ ಎಂದು ದಕ್ಷಿಣ ಆಫ್ರಿಕಾದ ವೇಗಿ ಡೇಲ್​ ಸ್ಟೇನ್ ಹೇಳಿದ್ದಾರೆ.

ಸದ್ಯ ಸ್ಟೇನ್‌, ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ಕ್ವೆಟ್ಟ ಗ್ಲಾಡಿಯೇಟರ್ಸ್‌ ತಂಡದ ಪರ ಆಡುತ್ತಿದ್ದಾರೆ. ಐಪಿಎಲ್​​ನಲ್ಲಿ ದೊಡ್ಡ ತಂಡಗಳು ಹಾಗೂ ದೊಡ್ಡ ಹೆಸರುಗಳು ಕ್ರಿಕೆಟ್​ನಿಂದ ಗಮನ ಸೆಳೆಯುತ್ತಿವೆ. ಇಲ್ಲಿ ಆಟಗಾರರು ಹಣ ಗಳಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ನಿಜವಾದ ಕ್ರಿಕೆಟ್ ಮರೆತು ಹೋಗುತ್ತಿದೆ ಎಂಬ ಕಳವಳ ಅವರದ್ದು.

ಇದನ್ನೂ ಓದಿ: ಅದ್ಭುತ ಪ್ರದರ್ಶನದ ಬಳಿಕ ಗರಿಗರಿ ದೋಸೆ ಸವಿದ ಕೃನಾಲ್ ಪಾಂಡ್ಯ

ಇತರ ಲೀಗ್​ಗಳಲ್ಲಿ ಆಡುವುದು ಆಟಗಾರನಾಗಿ ಸ್ವಲ್ಪ ಲಾಭದಾಯಕವಾಗಿದೆ ಎಂದಿರುವ ಅವರು, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹಣ ಸಿಗುವ ಬಗ್ಗೆ ಚರ್ಚೆಯಾಗುತ್ತದೆ. ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ ಎಂಬುದು ಅಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಜತೆಗೆ ಸೂಪರ್​ ಸ್ಟಾರ್​ ಆಟಗಾರರು ಕಾರಣ ಗುಣಮಟ್ಟದ ಕ್ರಿಕೆಟ್​ ಮರೆತು ಹೋಗುತ್ತದೆ. ಆದರೆ ಪಾಕಿಸ್ತಾನ ಸೂಪರ್ ಲೀಗ್​ ಮತ್ತು ಲಂಕಾ ಪ್ರೀಮಿಯರ್​ ಲೀಗ್​​ನಲ್ಲಿ ಕ್ರಿಕೆಟ್​ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

2020ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಕೇವಲ ಮೂರು ಪಂದ್ಯಗಳಲ್ಲಿ ಆಡಿದ್ದ ಸ್ಟೇನ್​, ಹೀನಾಯ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ತಂಡ ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಅವರು ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ಐಪಿಎಲ್​ನಲ್ಲಿ ಈಗಾಗಲೇ ಡೆಕ್ಕನ್​ ಚಾರ್ಜರ್ಸ್​, ಸನ್​ರೈಸರ್ಸ್ ಹೈದರಾಬಾದ್​ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ಸ್ಟೇನ್​, ಸದ್ಯ ಪಾಕ್​ ಲೀಗ್​ನಲ್ಲಿ ಆಡುತ್ತಿದ್ದಾರೆ.

ABOUT THE AUTHOR

...view details