ಕರ್ನಾಟಕ

karnataka

ETV Bharat / sports

ಜು.18ರಂದು ಸಾಲಿಡಾರಿಟಿ ಕಪ್: ಒಂದೇ ಪಂದ್ಯದಲ್ಲಿ ಸೆಣಸಾಡಲಿವೆ ಎಬಿಡಿ, ಡಿಕಾಕ್​, ರಬಾಡ ನೇತೃತ್ವದ 3 ತಂಡಗಳು! - ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ಡೇ

ಡಿಕಾಕ್​, ಡಿವಿಲಿಯರ್ಸ್​ ಹಾಗೂ ರಬಾಡ ನೇತೃತ್ವದಲ್ಲಿ ಈ ಟೂರ್ನಿ ನಡೆಯಲಿದೆ. 12 ಓವರ್​ಗಳಿದ್ದು, ಒಂದು ಇನ್ನಿಂಗ್ಸ್​ನಲ್ಲಿ 6 ಓವರ್​ಗಳಿರಲಿವೆ. ಒಂದು ತಂಡದಲ್ಲಿ 8 ಆಟಗಾರರಿದ್ದು, ಬ್ಯಾಟಿಂಗ್​ ಮಾಡುವ ತಂಡ ಒಮ್ಮೆ ಎರಡು ಎದುರಾಳಿಗಳನ್ನು ಎದುರಿಸಲಿದೆ.

Solidarity Cup
ಕ್ರಿಕೆಟ್​ ದಕ್ಷಿಣ ಆಫ್ರಿಕಾ

By

Published : Jul 1, 2020, 2:30 PM IST

ಜೊಹಾನ್ಸ್​​​​​ಬರ್ಗ್​: ಕ್ರಿಕೆಟ್​ ದಕ್ಷಿಣ ಆಫ್ರಿಕಾ ಬುಧವಾರ 3ಟಿ ಕ್ರಿಕೆಟ್​ ಪಂದ್ಯವನ್ನು ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದಂದು ನಡೆಸುವುದಾಗಿ ಘೋಷಣೆ ಮಾಡಿದ್ದು, ಈ ಪಂದ್ಯದಲ್ಲಿ ತಲಾ 8 ಆಟಗಾರರುಳ್ಳ ಮೂರು ತಂಡಗಳು ಒಂದೇ ಪಂದ್ಯದಲ್ಲಿ ಜುಲೈ 18 ರಂದು ಸಾಲಿಡಾರಿಟಿ ಕಪ್​ನ ಉದ್ಘಾಟನಾ ಪಂದ್ಯದಲ್ಲಿ ಸ್ಪರ್ಧಿಸಲಿವೆ ಎಂದು ತಿಳಿಸಿದೆ.

ಸೆಂಚುರಿಯನ್​ ಸೂಪರ್ ಸ್ಪೋರ್ಟ್ಸ್​ ಪಾರ್ಕ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮೂರು ತಂಡಗಳು ಸ್ಪರ್ಧಿಸುವುದನ್ನು ಕಾಣಬಹುದಾಗಿದೆ. ವಿಲಿಯರ್ಸ್​ ನೇತೃತ್ವದ ಈಗಲ್ಸ್​, ಕಗಿಸೊ ರಬಾಡ ನೇತೃತ್ವದ ಕಿಂಗ್​ಫಿಶರ್​ ಹಾಗೂ ಕ್ವಿಂಟನ್​ ಡಿಕಾಕ್​ ನೇತೃತ್ವದ ಕೈಟ್ಸ್​ ತಂಡಗಳು ಸಾಲಿಡಾರಿಟಿ ಕಪ್​ನಲ್ಲಿ ಪಾಲ್ಗೊಳ್ಳಲಿವೆ.

ಕ್ರಿಕೆಟ್​ ದಕ್ಷಿಣ ಆಫ್ರಿಕಾ

ಒಂದು ತಂಡಕ್ಕೆ 12 ಓವರ್​ಗಳು ಮೀಸಲಿರುತ್ತದೆ. ಒಂದು ಇನ್ನಿಂಗ್ಸ್​ನಲ್ಲಿ 6 ಓವರ್​ಗಳ ಆಟ ನಡಯಲಿದ್ದು, ಬ್ಯಾಟಿಂಗ್​ ಮಾಡುವ ತಂಡ ಎರಡು ತಂಡಗಳ ವಿರುದ್ಧಸ್ಪರ್ಧಿಸಲಿದೆ. 8 ಆಟಗಾರರಿರುವ ತಂಡದಲ್ಲಿ 7 ಆಟಗಾರರು ಔಟಾದರೂ ಉಳಿದ ಒಬ್ಬ ಬ್ಯಾಟ್ಸ್​ಮನ್​ ಆಟ ಏಕಾಂಗಿಯಾಗಿ ಬ್ಯಾಟಿಂಗ್​ ನಡೆಸಬಹುದಾಗಿದೆ. ಈ ಪಂದ್ಯದಲ್ಲಿ ಕೇವಲ 2 ರನ್​ ಹಾಗೂ ಬೌಂಡರಿ ಸಿಕ್ಸರ್​ಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಎರಡು ಇನ್ನಿಂಗ್ಸ್​ಗಳಲ್ಲಿ ಹೆಚ್ಚು ರನ್​ ಬಾರಿಸಿದ ತಂಡವನ್ನು ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ.

"ಟಾಪ್​ ಆಟಗಾರರನ್ನು ಒಳಗೊಂಡಿರುವ ಈ ಲೈವ್​ ಪಂದ್ಯವನ್ನು ಟಿವಿ ಪರದೆಯ ಮೇಲೆ ವೀಕ್ಷಿಸಲು ರೋಮಾಂಚನಕಾರಿಯಾಗಿರುತ್ತದೆ ಎಂದು ಸಿಎಸ್​ಎ ಮುಖ್ಯ ಕಾರ್ಯ ನಿರ್ವಾಹಕ(ಆ್ಯಕ್ಟಿಂಗ್​) ಡಾ.ಜಾಕ್ಸ್​ ಫಾಲ್​ ಹೇಳಿದ್ದಾರೆ. ಈ ಪಂದ್ಯವನ್ನು ಆಯೋಜಿಸಲು ನೆಲ್ಸನ್​ ಮಂಡೇಲಾ ದಿನಕ್ಕಿಂತ ಸೂಕ್ತವಾದ ದಿನದ ಬಗ್ಗೆ ಆಲೋಚಿಸಲು ನನಗೆ ಸಾಧ್ಯವಿಲ್ಲ. ಅದರ ಮುಖ್ಯ ಉದ್ದೇಶ ಎಂದರೆ ಕೊರೊನಾ ವೈರಸ್​ನಿಂದ ಸೋಂಕಿಗೆ ಒಳಗಾಗಿರುವವರಿಗೆ ಹಣ ಸಂಗ್ರಹ ಮಾಡುವುದಾಗಿದೆ" ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details