ವಿಜಯವಾಡ(ಆಂಧ್ರ ಪ್ರದೇಶ):ಆಂಧ್ರ ಪ್ರದೇಶ ಹಾಗೂ ವಿಜಯವಾಡ ತಂಡಗಳ ನಡುವೆ ನಡೆಯುತ್ತಿದ್ದ ರಣಜಿ ಕ್ರಿಕೆಟ್ ಪಂದ್ಯದ ವೇಳೆ ಆಶ್ಚರ್ಯಕರವಾದ ಘಟನೆ ನಡೆದಿದ್ದು, ಪಂದ್ಯ ನಡೆಯುತ್ತಿದ್ದಾಗಲೇ ಮೈದಾನಕ್ಕೆ ಹಾವೊಂದು ಲಗ್ಗೆ ಇಟ್ಟಿದೆ.
ರಣಜಿ ಟ್ರೋಫಿ ಪಂದ್ಯದ ವೇಳೆ ಮೈದಾನಕ್ಕೆ ಬಂದ ಅಪರೂಪದ ಅತಿಥಿ... ದಿಗಿಲುಗೊಂಡ ಆಟಗಾರರು! - ರಣಜಿ ಕ್ರಿಕೆಟ್ ಪಂದ್ಯ ಮೈದಾನದಲ್ಲಿ ಹಾವು
ರಣಜಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಏಕಾಏಕಿ ಮೈದಾನದಲ್ಲಿ ಹಾವೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ.
![ರಣಜಿ ಟ್ರೋಫಿ ಪಂದ್ಯದ ವೇಳೆ ಮೈದಾನಕ್ಕೆ ಬಂದ ಅಪರೂಪದ ಅತಿಥಿ... ದಿಗಿಲುಗೊಂಡ ಆಟಗಾರರು! Snake enter Ranji Trophy Cricket Match In Vijayawada](https://etvbharatimages.akamaized.net/etvbharat/prod-images/768-512-5316660-thumbnail-3x2-wdfdfdf.jpg)
ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಲಗ್ಗೆ ಹಾಕಿದ ಹಾವು
ಅಂಧ್ರ ಪ್ರದೇಶದ ವಿಜಯವಾಡದಲ್ಲಿ ಮೊದಲ ದಿನ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನ ಬಿಸಿಸಿಐ ಟ್ವೀಟ್ ಮಾಡಿದೆ. ಕೆಲ ನಿಮಿಷಗಳ ಕಾಲ ಹರಸಾಹಸಪಟ್ಟ ಮೈದಾನದ ಸಿಬ್ಬಂದಿ ಹಾವನ್ನ ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಮೈದಾನಕ್ಕೆ ಹಾವು ಎಂಟ್ರಿ ನೀಡುತ್ತಿದ್ದಂತೆ ಕೆಲ ಪ್ಲೇಯರ್ಸ್ ದಿಗಿಲುಗೊಂಡು, ಅದನ್ನೇ ನೋಡುತ್ತಾ ನಿಂತುಕೊಂಡಿದ್ದರಿಂದ ಕೆಲ ಸಮಯ ಪಂದ್ಯ ವಿಳಂಬಗೊಂಡಿದೆ. 2015ರಲ್ಲಿ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿತ್ತು.