ಕರ್ನಾಟಕ

karnataka

By

Published : Nov 7, 2019, 1:13 PM IST

ETV Bharat / sports

ವೇಗದ 2000 ರನ್​... ಕೊಹ್ಲಿ, ಗಂಗೂಲಿಗಿಂತಲೂ ಫಾಸ್ಟ್ ಸ್ಮೃತಿ ಮಂಧಾನ!

ಕೇವಲ 51 ಇನ್ನಿಂಗಸ್​ಗಳಲ್ಲಿ 2000 ರನ್​ ಪೂರೈಸುವ ಮೂಲಕ ಮಂಧಾನ ಕೊಹ್ಲಿ ಹಾಗೂ ಗಂಗೂಲಿಗಿಂತಲೂ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಕ್ರಿಕೆಟರ್​ ಎನಿಸಿಕೊಂಡಿದ್ದಾರೆ.

Smriti Mandhana

ಆಂಟಿಗುವಾ:ಗಾಯದಿಂದ ಚೇತರಿಸಿಕೊಂಡು ಮರಳಿದ ಪಂದ್ಯದಲ್ಲೇ ವಿಂಡೀಸ್​ ಮಹಿಳಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್​ ನಡೆಸಿದ ಆರಂಭಿಕ ಆಟಗಾರ್ತಿ ಮಂಧಾನ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 2000 ಸಾವಿರ ರನ್​ ಪೂರೈಸಿ ಭಾರತದ 2ನೇ ಕ್ರಿಕೆಟರ್​ ಹಾಗೂ ವಿಶ್ವದ 3ನೇ ಮಹಿಳಾ ಕ್ರಿಕೆಟರ್​ ಎಂಬ ದಾಖಲೆಗೆ ಪಾತ್ರರಾದರು.

ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಮಂಧಾನ ಪಾಲಿಗೆ ಈ ದಾಖಲೆ ಸೇರಿಕೊಂಡಿತು. ಈ ಪಂದ್ಯದಲ್ಲಿ ಮಂಧಾನ ಮಂಧಾನಾ 74 ರನ್‌ಗಳಿಸಿ ಮಿಂಚಿದರೆ, ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆರು ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು 2-1ರಲ್ಲಿ ವಶಪಡಿಸಿಕೊಂಡಿತು.

ಮಂಧಾನಾ ಏಕದಿನ ಕ್ರಿಕೆಟ್​ನಲ್ಲಿ 51 ಇನ್ನಿಂಗ್ಸ್‌ಗಳಲ್ಲಿ 2000 ರನ್​ ಪೂರೈಸಿದರು. ಮಹಿಳಾ ಕ್ರಿಕೆಟ್​ನಲ್ಲಿ ಈ ಬೆಲಿಂಡಾ ಕ್ಲಾರ್ಕ್​ 41 ಮತ್ತು ಮೆಗ್ ಲ್ಯಾನಿಂಗ್ 45 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ಭಾರತದ ಶಿಖರ್ ಧವನ್ 48 ಇನ್ನಿಂಗ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 53, ಗಂಗೂಲಿ 52 ಇನಿಂಗ್ಸ್​​ಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ 40 ಇನ್ನಿಂಗ್ಸ್‌ಗಳಲ್ಲಿ 2000 ರನ್​ ಪೂರೈಸಿರುವ ಏಕೈಕ ಕ್ರಿಕೆಟರ್​ ಎನಿಸಿಕೊಂಡಿದ್ದಾರೆ.

ABOUT THE AUTHOR

...view details