ಕರ್ನಾಟಕ

karnataka

ETV Bharat / sports

ಭಾರತೀಯ ಬೌಲರ್​ಗಳ ತಂತ್ರ ಆಸಕ್ತಿದಾಯಕ: ಗ್ಲೆನ್ ಮೆಕ್‌ಗ್ರಾಥ್

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್​ನಲ್ಲಿ ಸ್ಟೀವ್ ಸ್ಮಿತ್​ನ ವಿಕೆಟ್​ ಪಡೆದು ಪೆವಿಲಿಯನ್​ ಸೇರಿಸಿದ ಭಾರತೀಯ ಬೌಲರ್​ಗಳ ತಂತ್ರ ಆಸಕ್ತಿದಾಯಕ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್ ಹೇಳಿದ್ದಾರೆ.

ಸ್ಟೀವ್ ಸ್ಮಿತ್​
ಸ್ಟೀವ್ ಸ್ಮಿತ್​

By

Published : Jan 7, 2021, 1:28 PM IST

ಸಿಡ್ನಿ: ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದು, ಈ ವೇಳೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್ ಅವರು ಭಾರತೀಯ ಬೌಲರ್​ಗಳನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಟೀವ್ ಸ್ಮಿತ್​ನ ವಿಕೆಟ್​ ಪಡೆದು ಪೆವಿಲಿಯನ್​ ಸೇರಿಸಿದ ನಿಮ್ಮ ತಂತ್ರ ಆಸಕ್ತಿದಾಯಕ ಎಂದಿದ್ದಾರೆ.

ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಸ್ಮಿತ್ ಸತತ ಎರಡು ಶತಕಗಳನ್ನು ಗಳಿಸಿದ್ದರು. ಆದರೆ, ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳ ನಾಲ್ಕೂ ಇನಿಂಗ್ಸ್‌ಗಳಿಂದ ಬಲಗೈ ಬ್ಯಾಟ್ಸ್‌ಮನ್‌ ಗಳಿಸಿರುವುದು ಕೇವಲ 10 ರನ್‌ ಮಾತ್ರ.

"ಭಾರತೀಯ ಬೌಲರ್‌ಗಳು ಸ್ಮಿತ್‌ನನ್ನು ಸರಳವಾಗಿ ಔಟ್​ ಮಾಡಿದ್ದಾರೆ. ಇವರ ತಂತ್ರಗಳು ಸ್ಮಿತ್​ನನ್ನು ಪೆವಿಲಿಯನ್​ಗೆ ಮರಳುವಂತೆ ಮಾಡಿದೆ. ಒಂದು ವೇಳೆ ಸ್ಮಿತ್​ 20 ರಿಂದ 30 ರನ್​ ಗಳಿಸಿದರೆ ಮತ್ತೆ ಅವರನ್ನು ಔಟ್​ ಮಾಡುವುದು ಕಷ್ಟ. ಆದರೆ, ಭಾರತೀಯ ಬೌಲರ್​ಗಳು ಪಿಚ್​ ಚೆನ್ನಾಗಿ ಬಳಸಿಕೊಂಡು ಉತ್ತಮ ಬೌಲಿಂಗ್​ ಮಾಡಿದ್ದಾರೆ" ಎಂದಿದ್ದಾರೆ.

"ಈ ಸರಣಿಯಲ್ಲಿ ಅಶ್ವಿನ್ ಅದ್ಭುತ ಬೌಲಿಂಗ್ ಮಾಡಿದರು. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಟೀಂ ಇಂಡಿಯಾದ ಬೌಲಿಂಗ್​ನಿಂದ ಸುಧಾರಿಸುವುದು ಕಷ್ಟವಾಗಿದೆ. ಇದು ದೊಡ್ಡ ಯುದ್ಧ ಎಂದು ನಾನು ಭಾವಿಸುತ್ತೇನೆ" ಎಂದರು.

ABOUT THE AUTHOR

...view details