ಸಿಡ್ಮಿ: ಭಾರತ ತಂಡದ ಉದಯೋನ್ಮುಖ ವೇಗಿ, ಯಾರ್ಕರ್ ಕಿಂಗ್ ಎಂದೇ ಕರೆಸಿಕೊಳ್ಳುತ್ತಿರುವ ನಟರಾಜನ್, ತಾವಾಡಿದ ಮೊದಲ ಸರಣಿಯಲ್ಲೇ ಗೆಲುವು ಸಾಧಿಸಿರುವುದು ಎಂದಿಗೂ ಸ್ಮರಣೀಯ ಮತ್ತು ವಿಶೇಷವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ತಮಿಳುನಾಡಿದ ಯಾರ್ಕರ್ ಕಿಂಗ್ ನಟರಾಜನ್ ಆಡಿರುವ 2 ಟಿ-20 ಪಂದ್ಯಗಳಲ್ಲೇ 5 ವಿಕೆಟ್ ಪಡೆದು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಸತತ ಎರಡು ಪಂದ್ಯಗಳಲ್ಲಿ ಮಣಿಸಲು ನೆರವಾಗಿದ್ದಾರೆ. 2ನೇ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ 2 ವಿಕೆಟ್ ಪಡೆದು ಭಾರತಕ್ಕೆ ಟಿ-20 ಸರಣಿ ಗೆಲುವಿಗೆ ಕಾರಣರಾಗಿರುವ ನಟರಾಜನ್ ತಮ್ಮ ಟ್ವಿಟರ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
"ನನ್ನ ದೇಶದಕ್ಕಾಗಿ ಮೊದಲ ಸರಣಿ ಗೆದ್ದಿರುವುದು ಸ್ಮರಣೀಯ ಮತ್ತು ವಿಶೇಷವಾದದ್ದು" ಎಂದು ನಟರಾಜನ್ ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ಯಾರ್ಕರ್ ಕಿಂಗ್ ಎಂದೇ ಖ್ಯಾತರಾಗಿರುವ ಜಸ್ಪ್ರೀತ್ ಬುಮ್ರಾ ಸಿಡ್ನಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 73 ಮತ್ತು 79, ಅನುಭವಿ ಮೊಹಮ್ಮದ್ ಶಮಿ 59 ಮತ್ತು 73 ಹಾಗೂ ಆಸ್ಟ್ರೆಲಿಯಾದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ 65 ಮತ್ತು 82 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಆದರೆ ಅಂತಹ ಕಠಿಣ ಪಿಚ್ನಲ್ಲೇ ಕೇವಲ 5ರ ಎಕಾನಮಿಯಲ್ಲಿ ಬೌಲಿಂಗ್ ಮಾಡುವ ಮೂಲಕ ನಟರಾಜನ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು.
ನಟರಾಜನ್ ಐಪಿಎಲ್ನಲ್ಲಿ 16 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರು. ಅವರು ಟೂರ್ನಿಯಲ್ಲಿ 166 ಯಾರ್ಕರ್ ಬೌಲಿಂಗ್ ಮಾಡುವ ಮೂಲಕ ಗರಿಷ್ಠ ಯಾರ್ಕರ್ ಎಸೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.