ಸಿಡ್ನಿ:ಮೂರನೇ ಟೆಸ್ಟ್ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ರಿಷಭ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್ಅನ್ನು ಸ್ಮಿತ್ ಅಳಿಸುತ್ತಿರುವುದು ಸ್ಟಂಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆದ ನಂತರ ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸ್ಮಿತ್ರನ್ನು ಚೀಟರ್ ಎಂದು ಮೂದಲಿಸಿದ್ದರು.
ಆದರೆ ಇಂದು ನಿನ್ನೆಯ ಪಂದ್ಯದ ವೇಳೆ ಅಶ್ವಿನ್ ಜೊತೆಗೆ ಬೇಡದ ಮಾತು ಸೇರಿದ್ದರೆ ಮೈದಾನದಲ್ಲಿ ತಮ್ಮಿಂದಾಗಿದ್ದ ಕೆಲವು ತಪ್ಪುಗಳಿಗೆ ಕ್ಷಮೆ ಕೋರಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಸ್ಮಿತ್ ವಿಚಾರದ ಬಗ್ಗೆಯೂ ಮಾತನಾಡಿದ್ದು, "ಸ್ಮಿತ್ ಎದುರಾಳಿ ಬ್ಯಾಟ್ಸ್ಮನ್ಗಳ ವಿರುದ್ಧ ಈ ರೀತಿ ಕೆಟ್ಟ ಕೆಲಸ ಮಾಡುವಂತಹ ಆಟಗಾರ ಅಲ್ಲ. ಅವರೂ ಕೂಡ ಈ ಕೃತ್ಯವನ್ನು ಬಣ್ಣಿಸುತ್ತಿರುವ ರೀತಿಗೆ ನಿರಾಶೆಯಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ವಿಷಯ ಕುರಿತು ನಾನು ಸ್ಟೀವ್ ಜೊತೆ ಮಾತಾಡಿದೆ. ಅವರು ಈ ಘಟನೆಯಲ್ಲಿ ತಮ್ಮನ್ನು ಬಿಂಬಿಸುತ್ತಿರುವ ರೀತಿಗೆ ತುಂಬಾ ಬೇಸರಗೊಂಡಿದ್ದಾರೆ" ಎಂದು ಆಸೀಸ್ ನಾಯಕ ಹೇಳಿದ್ದಾರೆ.
ನೀವು ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ ಅಡುವುದನ್ನು ನೀವು ನೋಡಿದ್ದರೆ ತಿಳಿಯುತ್ತದೆ, ಅವರು ಪ್ರತಿ ಪಂದ್ಯದಲ್ಲೂ ದಿನಕ್ಕೆ ಐದು ಅಥವಾ ಆರು ಬಾರಿ ಕ್ರೀಸಿಗೆ ಬಂದು ಹೋಗುವುದನ್ನು ಗಮನಿಸಿರುತ್ತೀರಿ. ಅವರು ಯಾವಾಗಲೂ ಬ್ಯಾಟಿಂಗ್ ಕ್ರೀಸಿನಲ್ಲಿ ನಿಂತಿರುತ್ತಾರೆ. ಶ್ಯಾಡೋ ಬ್ಯಾಟಿಂಗ್ ಎಂದು ಹೇಳಬಹುದು. ಅಂಥ ಹಲವಾರು ಕ್ರಿಯೆಗಳನ್ನು ಅವರು ಪ್ರತಿನಿತ್ಯ ಮಾಡುತ್ತಿರುತ್ತಾರೆ. ಬ್ಯಾಟಿಂಗ್ ಗಾರ್ಡನ್ನು ಆಗಾಗ ಮಾರ್ಕ್ ಮಾಡುವುದು ಅವುಗಳಲ್ಲಿ ಒಂದು ಎಂದು ಪೇನ್ ಹೇಳಿದ್ದಾರೆ.
ಅಲ್ಲದೆ ಸ್ಮಿತ್ ಭಾರತೀಯ ಬ್ಯಾಟ್ಸ್ಮನ್ಗಳ ಗಾರ್ಡ್ ಮಾರ್ಕ್ಗಳನ್ನು ಬದಲಾಯಿಸಿದ್ದರೆ ಕ್ರೀಸ್ನಲ್ಲಿದ್ದ ಆಟಗಾರರ ಗಮನಕ್ಕೆ ಬರುತ್ತಿತ್ತು. ಆಗ ಅವರು ಅಂಪೈರ್ಗಳಿಗೆ ದೂರು ನೀಡುತ್ತಿದ್ದರು. ಆದರೆ ಸ್ಮಿತ್ ಹಲವಾರು ಬಾರಿ ಟೆಸ್ಟ್ ಮತ್ತು ಶೀಲ್ಡ್ ಪಂದ್ಯಗಳಲ್ಲಿ ಕ್ರೀಸಿನ ಬಳಿ ಹೋಗಿ, ತಾನು ಬ್ಯಾಟಿಂಗ್ ಮಾಡುತ್ತಿರುವಂತೆ ಕಲ್ಪಿಸಿಕೊಂಡು ಹೇಗೆ ಆಡಬಹುದು ಅನ್ನುವುದನ್ನು ಆಲೋಚಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ತಾವೇ ಬ್ಯಾಟ್ಸ್ಮನ್ ಎಂದು ಅವರು ಭಾವಿಸುತ್ತಾರೆ. ಗಾರ್ಡ್ ಗುರುತಿಸುವುದು ಅವರ ಹಲವಾರು ಮ್ಯಾನರಿಸಂಗಳಲ್ಲಿ ಒಂದು ಎಂದು ಸ್ಮಿತ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನು:ಸ್ಟಂಪ್ ಕ್ಯಾಮೆರದಲ್ಲಿ ಸೆರೆಯಾಯ್ತು ಆಸೀಸ್ ಕ್ರಿಕೆಟಿಗನ ವಿಕೃತಿ: ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ!