ಮುಂಬೈ :2021ರ ಐಪಿಎಲ್ ಆವೃತ್ತಿಗೆ ಯುವ ಆಟಗಾರ ಸಂಜು ಸಾಮ್ಸನ್ ಅವರನ್ನು ನಾಯಕನಾಗಿ ನೇಮಕ ಮಾಡಿದೆ. ಕಳೆದ ಐಪಿಎಲ್ನಲ್ಲಿ ನಾಯಕನಾಗಿದ್ದ ಸ್ಟೀವ್ ಸ್ಮಿತ್ರನ್ನು ಹರಾಜಿಗೂ ಮುನ್ನ ಬಿಡುಗಡೆಗೊಳಿಸಿದೆ.
ಆರಂಭಿಕ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸಾಮ್ಸನ್ ಅವರನ್ನು 2021ರ ಆವೃತ್ತಿಗೆ ನಾಯಕನನ್ನಾಗಿ ನೇಮಿಸಿದೆ.
ಬುಧವಾರ ರೀಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನ ಈ ವಿಚಾರವನ್ನು ರಾಯಲ್ಸ್ ಟ್ವೀಟ್ ಮೂಲಕ ಖಚಿತ ಪಡಿಸಿದೆ. ಇದರ ಜೊತೆಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಾಕ್ಕರರನ್ನು ರಾಯಲ್ಸ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕ ಮಾಡಿರುವುದಾಗಿ ಆರ್ಆರ್ ಸಹ ಮಾಲೀಕ ಮನೋಜ್ ಬಾದಲೆ ತಿಳಿಸಿದ್ದಾರೆ.
ಸ್ಟೀವ್ ಸ್ಮಿತ್ 2008ರಿಂದ 2 ವರ್ಷ ನಿಷೇಧಗೊಂಡ ವರ್ಷಗಳನ್ನು ಹೊರತುಪಡಿಸಿ ಎಲ್ಲಾ ಆವೃತ್ತಿಗಳಲ್ಲೂ ರಾಯಲ್ಸ್ ತಂಡದ ಪರ ಆಡಿದ್ದರು. ಅವರು 2021ರ ಆವೃತ್ತಿಯಲ್ಲಿ 14 ಪಂದ್ಯಗಳಿಂದ 311 ರನ್ಗಳಿಸಿದ್ದರು.
2021 ಐಪಿಎಲ್ಗೆ ರಾಜಸ್ಥಾನ್ ರಾಯಲ್ಸ್ ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿದ್ದು, ಸ್ಮಿತ್ ಸೇರಿದಂತೆ 8 ಆಟಗಾರರನ್ನು ಬಿಡುಗಡೆ ಮಾಡಿದೆ. ರಾಯಲ್ಸ್ ಟಾಮ್ ಕರ್ರನ್, ಆಕಾಶ್ ಸಿಂಗ್, ಒಶಾನ್ ಥಾಮಸ್.
ರಾಜಸ್ಥಾನ್ ರಾಯಲ್ಸ್ ಉಳಿಸಿಕೊಂಡ ಆಟಗಾರರು
ಸಂಜು ಸಾಮ್ಸನ್, ಬೆನ್ಸ್ಟೋಕ್ಸ್, ಜೋಶ್ ಬಟ್ಲರ್, ಜೋಫ್ರಾ ಆರ್ಚರ್, ರಾಹುಲ್ ತೆವಾಟಿಯಾ, ಜಯದೇವ್ ಉನ್ನಾದ್ಕಟ್, ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರ್ಯೂ ಟೈ, ಅನುಜ್ ರಾವತ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಮಹಿಪಾಲ್ ಲ್ಯಾಮ್ರೋರ್, ಶ್ರೇಯಸ್ ಗೋಪಾಲ್, ಮನನ್ ವೊಹ್ರಾ.