ಕೊಲಂಬೊ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತಾರಾಷ್ಟ್ರೀಯ ವಿಮಾನಯಾನದ ಪುನಾರಂಭವನ್ನು ಆಗಸ್ಟ್ 1ರವರೆಗೆ ಸರ್ಕಾರ ಮುಂದೂಡಿರುವ ಹೊರತಾಗಿಯೂ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ಅನ್ನು ಆಗಸ್ಟ್ 8ರಿಂದ ಆಗಸ್ಟ್ 22ರವರೆಗೆ ಆಯೋಜಿಸುವ ಆಶಾವಾದ ಹೊಂದಿದೆ.
ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಲೀಗ್ ಆಯೋಜಿಸಲು ಕ್ರೀಡಾ ಸಚಿವಾಲಯದಿಂದ ಅನುಮತಿ ಪಡೆದಿದೆ. ಆದರೆ ಲಂಕಾ ಪ್ರೀಮಿಯರ್ ಲೀಗ್ ಸರ್ಕಾರ ವಿಮಾನಯಾನ ನಿರ್ಬಂಧ ವಾಪಸ್ ತಗೆದುಕೊಳ್ಳುವುದರ ಮೇಲೆ ನಿಂತಿದೆ. ಏಕೆಂದರೆ ಇದು ಫ್ರಾಂಚೈಸಿ ಕ್ರಿಕೆಟ್ ಲೀಗ್ ಆಗಿರುವುದರಿಂದ ವಿದೇಶಿ ಆಟಗಾರರೂ ಪಾಲ್ಗೊಳ್ಳಬೇಕಿದೆ.
ನಾವು ಈ ವಿಚಾರವಾಗಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ಮಾತನಾಡಲು ಬಯಸುತ್ತೇವೆ. ಮತ್ತು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಎಸ್‌ಎಲ್‌ಸಿ ಸಿಇಒ ಆ್ಯಶ್ಲೆ ಡಿ. ಸಿಲ್ವಾ ಉಲ್ಲೇಖಿಸಿದ್ದಾರೆ.