ಕರ್ನಾಟಕ

karnataka

ETV Bharat / sports

ಕೊರೊನಾ ಮಧ್ಯೆಯೂ ಚೊಚ್ಚಲ ಸಿಪಿಎಲ್​ ನಡೆಸುವ ವಿಶ್ವಾಸದಲ್ಲಿ ಶ್ರೀಲಂಕಾ ಕ್ರಿಕೆಟ್​ ಮಂಡಳಿ - SLC

ಶ್ರೀಲಂಕಾ ಏಷ್ಯಾದಲ್ಲಿನ ಬೇರೆ ರಾಷ್ಟ್ರಗಳಿಗಿಂತ ಕೋವಿಡ್ 19 ಅನ್ನು ಮಟ್ಟಹಾಕುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿರುವುದರಿಂಧ ಚೊಚ್ಚಲ ಲಂಕಾ ಪ್ರೀಮಿಯರ್​ ಲೀಗ್​ಅನ್ನು ಆಯೋಜಿಸುವ ವಿಶ್ವಾಸವನ್ನು ಎಸ್​ಎಲ್​ಸಿ ವ್ಯಕ್ತಪಡಿಸಿದೆ.

ಶ್ರೀಲಂಕಾ ಕ್ರಿಕೆಟ್​ ಮಂಡಳಿ
ಶ್ರೀಲಂಕಾ ಕ್ರಿಕೆಟ್​ ಮಂಡಳಿ

By

Published : Aug 11, 2020, 3:24 PM IST

ಕೊಲೊಂಬೋ: ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್​ ಯೋಜನೆಯಂತೆ ನಡೆಯುವುದು ಎಂದು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಉಪಾಧ್ಯಕ್ಷ ರವಿನ್ ವಿಕ್ರಮರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿಯ ಪ್ರಕಾರ, ಎಸ್‌ಎಲ್‌ಸಿ ಈಗ ಟೂರ್ನಮೆಂಟ್​ಗಾಗಿ ಸಂಘಟಕರನ್ನು ಕಂಡುಹಿಡಿದಿದೆ. ಎಸ್​ಎಲ್​ಸಿ ಈ ಹಿಂದೆ ಪಾಕಿಸ್ತಾನ ಸೂಪರ್​ ಲೀಗ್​ ಪ್ರೊಡಕ್ಷನ್ ಹಾಗೂ ಬ್ರಾಡ್​ಕಾಸ್ಟ್​ನಲ್ಲಿ ಭಾಗಿಯಾಗಿದ್ದ ದುಬೈ ಮೂಲದ ಇನ್ನೋವೇಟಿವ್​ ಪ್ರೊಡಕ್ಷನ್​ ಗ್ರೂಪ್​ನೊಂದಿಗೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿದುಬಂದಿದೆ.

ಒಪ್ಪಂದದ ಷರತ್ತುಗಳ ಪ್ರಕಾರ ಎಲ್​ಪಿಎಲ್​ನ 5 ತಂಡಗಳಿಗೆ ಫ್ರಾಂಚೈಸಿಗಳನ್ನು ಹುಡುಕುವುದು ಮತ್ತು ಸುರಕ್ಷಿತ ಪ್ರಾಯೋಜಕರನ್ನು ಹುಡುಕಲು ಇನ್ನೋವೇಟಿವ್​ ಪ್ರೊಡಕ್ಷನ್​ ಗ್ರೂಪ್​ ಕಾರ್ಯನಿರತವಾಗಿದೆ. ಅಧಿಕಾರಿಗಳ ಪ್ರಕಾರ ಈಗಾಗಲೇ 70 ವಿದೇಶಿ ಆಟಗಾರರು ಎಲ್​ಪಿಎಲ್​ನ ಭಾಗವಾಗಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.

ಟೂರ್ನಮೆಂಟ್​ ಆಗಸ್ಟ್ 28 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 20 ರಂದು ಮುಕ್ತಾಯಗೊಳ್ಳಲಿದೆ.

ನಾವು ಆಗಸ್ಟ್​ 28ರಂದು ಪ್ರಾರಂಭಿಸಲು ಸಿದ್ಧರಿದ್ದೇವೆ. ಆದರೆ ಅದಕ್ಕೂ ಮೊದಲ ಆರೋಗ್ಯ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳನ್ನು ನಾವು ಪಡೆಯಬೇಕಿದೆ ಎಂದು ವಿಕ್ರಮರತ್ನ ತಿಳಿಸಿದ್ದಾರೆ.

ಆಗಸ್ಟ್​ 13ರಂದು ನಮಗೆ ಮಾರ್ಗ ಸೂಚಿಗಳನ್ನು ಆರೋಗ್ಯ ಇಲಾಖೆ ನೀಡಲಿದೆ. ನಾವು ಆರೋಗ್ಯ ಇಲಾಖೆಯ ಅಧಿಕಾರಿಗೊಳೊಂದಿಗೆ ಒಂದೆರಡು ಸಭೆ ನಡೆಸಿದ್ದೇವೆ. ವಿದೇಶಿ ಆಟಗಾರರ 7 ದಿನಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಪ್ರವಾಸಿಗರು 7 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಈ ಸಮಯದಲ್ಲಿ ಅವರ ಚಲನವಲನಗಳನ್ನು ನಿರ್ಬಂಧಿಸಿಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಕೊಲೊಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ ಮತ್ತು ಜಾಫ್ನಾವನ್ನು ನಗರ ಮೂಲದ ಐದು ಪ್ರಾಂಚೈಸಿಗಳಿರಲಿವೆ. ಆದರೆ ಇನ್ನು ಫ್ರಾಂಚೈಸಿಗಳನ್ನು ಅಂತಿಮ ಮಾಡಿಲ್ಲವೆಂದು ತಿಳಿದುಬಂದಿದೆ.

ABOUT THE AUTHOR

...view details