ಹೈದರಾಬಾದ್: ಎರಡು ವರ್ಷಗಳಲ್ಲಿ ಸತತ ಎರಡು ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ಎರಡು ಬಾರಿ ಆಸೀಸ್ ತಂಡವನ್ನು ಮಣಿಸಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ.
ಪ್ರಮುಖ ಆಟಗಾರರ ಅಲಭ್ಯ ಮತ್ತು ತಂಡದ ಹಲವು ಆಟಗಾರರ ಗಾಯದ ನಡುವೆಯೂ ಭಾರತ ಆತಿಥೇಯ ಆಸ್ಟ್ರೇಲಿಯಾವನ್ನು 2-1 ರಿಂದ ಸರಣಿ ಸೋಲಿಸಲು ಸಹಾಯ ಮಾಡಿದ ಆರು ಪ್ರಮುಖ ಕಾರಣಗಳು ಇಲ್ಲಿವೆ:
1. ಇಂಡಿಯನ್ ಪ್ರೀಮಿಯರ್ ಲೀಗ್: ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಂಡಗಳನ್ನು ಪ್ರತಿನಿಧಿಸುವ ಟೀಂ ಇಂಡಿಯಾ ಆಟಗಾರರು ಆಸೀಸ್ನ ಹಾಲಿ ಮತ್ತು ಮಾಜಿ ಆಟಗಾರರಿಂದ ಹಲವು ಸಲಹೆಗಳನ್ನು ಪಡೆದಿದ್ದಾರೆ. ಡೆಲ್ಲಿ ತಂಡದಲ್ಲಿದ್ದ ರಿಷಭ್ ಪಂತ್ ರಿಕಿ ಪಾಂಟಿಂಗ್ ಅವರಿಂದ ಹಲವು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಆರ್ಸಿಬಿ ತಂಡದಲ್ಲಿದ್ದ ವಾಷಿಂಗ್ಟನ್ ಸುಂದರ್ ಮತ್ತು ಮೊಹಮ್ಮದ್ ಸಿರಾಜ್ ಸೈಮನ್ ಕ್ಯಾಟಿಚ್ ಮತ್ತು ಫಿಂಚ್ ಅವರಿಂದ ಹಲವು ಸಲಹೆ ಪಡೆದುಕೊಂಡಿದ್ದಾರೆ. ಶುಬ್ಮನ್ ಗಿಲ್ ಕೆಕೆಆರ್ ತಂಡದಲ್ಲಿದ್ದಾಗ ನೆಟ್ನಲ್ಲಿ ಕಮ್ಮಿನ್ಸ್ ಬೌಲಿಂಗ್ ಎದುರಿಸಿದ ಅನುಭವ ಹೊಂದಿದ್ದರು. ಇತ್ತ ಸಿಎಸ್ಕೆ ತಂಡದಲ್ಲಿದ್ದ ಶರ್ದೂಲ್ ಠಾಕೂರ್, ಹೆಜಲ್ವುಡ್ ಅವರಿಂದ ಬೌಲಿಂಗ್ ಬಗ್ಗೆ ಟಿಪ್ಸ್ ಪಡೆದುಕೊಂಡಿದ್ದರು. ಅನುಭವಿ ಆಸೀಸ್ ಆಟಗಾರರಿಂದ ಸಲಹೆ ಗಳನ್ನು ಪಡೆದು ನಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ಟೀಂ ಇಂಡಿಯಾ ಆಟಗಾರರಿಗೆ ಐಪಿಎಲ್ ಸಹಕಾರಿಯಾಗಿತ್ತು.
2. ಸ್ಟ್ರಾಂಗ್ ಬೆಂಚ್:2010 ರಿಂದ, ಇಂಡಿಯಾ ಎ 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದೆ, ಇದು ವಿಶ್ವದ ಯಾವುದೇ ತಂಡಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದೆ. ಪೇಸ್ ಬೌಲರ್ ಮೊಹಮ್ಮದ್ ಸಿರಾಜ್ 16 ಪ್ರಥಮ ದರ್ಜೆ ಪಂದ್ಯಗಳನ್ನು, ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಎಂಟು, ಹನುಮಾ ವಿಹಾರಿ 12, ರಿಷಭ್ ಪಂತ್ ನಾಲ್ಕು ಪಂದ್ಯಗಳನ್ನು ಮತ್ತು ಪೇಸ್ ಬೌಲರ್ ಶಾರ್ದುಲ್ ಠಾಕೂರ್ ಭಾರತ ಎ ಪರ ಆಡಿದ್ದಾರೆ. ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಹಲವು ಆಟಗಾರರಿಗೆ ಈ ಪಂದ್ಯಗಳು ಸಹಕಾರಿಯಾಗಿವೆ.
3. ಆಗಾಗ್ಗೆ ಆಸ್ಟ್ರೇಲಿಯಾ ಪ್ರವಾಸಗಳು:ಭಾರತೀಯ ತಂಡ ಕಳೆದ 10 ವರ್ಷಗಳಲ್ಲಿ ನಾಲ್ಕು ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ಇದು ಭಾರತೀಯರು ದೇಶಕ್ಕೆ ಕೈಗೊಂಡ 'ಎ' ಪ್ರವಾಸಗಳನ್ನು ಹೊರತುಪಡಿಸಿ. ಈ ಹಿಂದೆ 2018-19 ರಲ್ಲಿ ಭಾರತ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿತ್ತು. ಆಗಾಗ್ಗೆ ಪ್ರವಾಸಗಳು ಕೈಗೊಂಡಿರುವುದು ಅಲ್ಲಿನ ವಾತಾವರಣ ಮತ್ತು ಪಿಚ್ ಕಂಡೀಷನ್ಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.
4. ಕೋವಿಡ್ -19:ಎಲ್ಲ ಮೂರು ಸ್ವರೂಪಗಳ ಭಾರತೀಯ ತಂಡಗಳು ಒಟ್ಟಿಗೆ ಆಸ್ಟ್ರೇಲಿಯಾವನ್ನು ತಲುಪಿದವು. ಸರಣಿ ಪ್ರಾರಂಭವಾಗುವುದಕ್ಕೆ ಒಂದು ತಿಂಗಳ ಮೊದಲು ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದರಿಂದ ಟೆಸ್ಟ್ ತಂಡವು ಹೆಚ್ಚಿನ ಲಾಭ ಗಳಿಸಿತು. ಒಂದು ತಿಂಗಳ ಸುದೀರ್ಘ ಅವಧಿಯು ತಂಡವು ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಸಹಾಯ ಮಾಡಿತು. ಸರಣಿಗೂ ಮೊದಲು ಒಂದೆರಡು ಅಭ್ಯಾಸ ಪಂದ್ಯಗಳನ್ನು ಸಹ ಆಡಿದ್ದರು. ಟಿ ನಟರಾಜನ್, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರು ನೆಟ್ ಬೌಲರ್‌ಗಳಾಗಿ ಉಳಿದುಕೊಂಡಿದ್ದರು.
5. ತಂಡದೊಳಗಿನ ಸ್ಪರ್ಧೆ: ತಂಡದಲ್ಲಿ ಸ್ಥಾನಗಳ ತೀವ್ರ ಸ್ಪರ್ಧೆಯು ಆಟಗಾರರು ಎರಡೂ ಕೈಗಳಿಂದ ಅವಕಾಶವನ್ನು ಪಡೆದುಕೊಳ್ಳಲು ಸಹಾಯ ಮಾಡಿದೆ. ಮೊದಲ ಟೆಸ್ಟ್ ನಂತರ ಪೃಥ್ವಿ ಶಾ ಅವರನ್ನು ಕೈಬಿಟ್ಟಾಗ, ಯುವಕ ಶುಬ್ಮನ್ ಗಿಲ್ ಸ್ಥಾನ ಪಡೆದು ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡರು. ಕಳಪೆ ವಿಕೆಟ್ ಕೀಪಿಂಗ್ ಕೌಶಲ್ಯದಿಂದಾಗಿ ರಿಷಭ್ ಪಂತ್ ಅವರ ಸ್ಥಾನವನ್ನೂ ಪ್ರಶ್ನಿಸಲಾಯಿತು ಆದರೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬ್ಯಾಟ್ ಮೂಲಕ ಪ್ರದರ್ಶನ ನೀಡಿದರು.
6. ದೇಶಿ ಕ್ರಿಕೆಟ್:ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಮತ್ತು ಇರಾನಿ ಟ್ರೋಫಿಯನ್ನು ಒಳಗೊಂಡ ಭಾರತದ ದೇಶಿ ಕ್ರಿಕೆಟ್ ರಚನೆಯು ಬಹು - ದಿನದ ಸ್ವರೂಪದಲ್ಲಿದೆ. ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ಟಿ ನಟರಾಜನ್, ನವದೀಪ್ ಸೈನಿ, ಎಲ್ಲರೂ ತಮ್ಮ ಮೊದಲ ಪೂರ್ಣ ಟೆಸ್ಟ್ ಸರಣಿಯನ್ನು ಆಡುವಾಗ ಯಾವುದೇ ತೊಂದರೆ ಎದುರಿಸಲಿಲ್ಲ. ಎಲ್ಲರೂ ಕನಿಷ್ಠ ಐದು ವರ್ಷಗಳ ಹಿಂದೆ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ರಾಜ್ಯ ತಂಡಗಳಿಗೆ ಮುಂಚೂಣಿ ಬೌಲರ್‌ಗಳಾಗಿದ್ದಾರೆ. ಭಾರತೀಯ ದೇಶೀಯ ಕ್ರಿಕೆಟ್ ಫ್ಲಾಟ್, ಬ್ಯಾಟಿಂಗ್ ಸ್ನೇಹಿ ಪಿಚ್‌ಗಳನ್ನು ಸಹ ಒದಗಿಸಿದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ವಿಶ್ವಾಸವನ್ನು ಮತ್ತು ಬೌಲರ್‌ಗಳನ್ನು ಬಿಗಿಯಾಗಿ ಬೌಲಿಂಗ್ ಮಾಡಲು ಸಹಾಯ ಮಾಡಿದೆ, ಇದು ಆಸ್ಟ್ರೇಲಿಯಾದ ಫ್ಲಾಟ್ ಪಿಚ್‌ಗಳಿಗೆ ಸಹಾಯ ಮಾಡಿತು.