ಸೇಂಟ್ ಜಾನ್ಸ್: ವೆಸ್ಟ್ ಇಂಡೀಸ್ ತಂಡದ ಕೋಚ್ ಫಿಲ್ ಸಿಮ್ಮನ್ಸ್ ಅವರ ಪರ ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್ ನಿಂತಿದ್ದು, ಸಿಮನ್ಸ್ ಅವರ ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಂಡಳಿಯಿಂದ ಅನುಮತಿ ಪಡೆದಿದ್ದರು. ಆದ್ದರಿಂದ ಅವರು ಕೆಲಸ ಕಳೆದುಕೊಳ್ಳುವ ಅಪಾಯವಿಲ್ಲ ಎಂದಿದ್ದಾರೆ.
ಜುಲೈ 8 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸಣಿ ಆರಂಭವಾಗಲಿದೆ. ಈ ವೇಳೆ ಸಿಮನ್ಸ್ ತಮ್ಮ ಮಾವನ ಅಂತ್ಯ ಸಂಸ್ಕಾರಕ್ಕಾಗಿ ಬಯೋ ಸೆಕ್ಯೂರ್ ಸ್ಥಳದಿಂದ ಹೊರ ಬಂದಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಕೋಚ್ ಹುದ್ದೆಯಿಂದ ತೆಗೆದು ಹಾಕಬೇಕೆಂದು ಬಾರ್ಬಡೋಸ್ ಕ್ರಿಕೆಟ್ ಅಸೋಸಿಯೇಷನ್ನ (ಬಿಸಿಎ) ಮುಖ್ಯಸ್ಥ ಹಾಗೂ ಕ್ರಿಕೆಟ್ ವೆಸ್ಟ್ ಇಂಡೀಸ್ ಮಂಡಳಿಯ ಸದಸ್ಯರೂ ಆಗಿರುವ ಕಾಂಡೆ ರಿಲೆ ಒತ್ತಾಯಿಸಿದ್ದರು.
ಆದರೆ ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್ ಸಿಮನ್ಸ್ ಅವರ ಹುದ್ದೆಗೆ ಯಾವುದೇ ಸಂಚಕಾರ ಇಲ್ಲ ಎಂದು ತಿಳಿಸಿದ್ದಾರೆ.
ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್ ಫಿಲ್ ಸಿಮನ್ಸ್ ಕ್ರಿಕೆಟ್ ವೆಸ್ಟ್ ಇಂಡೀಸ್ನ ಸಂಪೂರ್ಣ ಬೆಂಬಲ ಹೊಂದಿದ್ದಾರೆ ಎಂದು ನಾನು ವೆಸ್ಟ್ ಇಂಡೀಸ್ ಕ್ರಿಕೆಟ್ ಅಭಿಮಾನಿಗಳಿಗೆ ಸಂಪೂರ್ಣ ಭರವಸೆ ನೀಡುತ್ತೇನೆ. ಆ ಪತ್ರದಿಂದ ಸಿಮನ್ಸ್ ಹುದ್ದೆಗೆ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ಸ್ಕೆರಿಟ್ ಕಾನ್ಫರೆನ್ಸ್ ಕಾಲ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಅವರು ಒಂಬತ್ತು ತಿಂಗಳ ಹಿಂದೆ ವಿಂಡೀಸ್ ಕೋಚ್ ಆಗಲು ಬಹಳ ಹುರುಪಿನ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಾವು ಈ ಹುದ್ದೆಗೆ ಕಂಡುಕೊಳ್ಳಬಹುದಾದ ಅತ್ಯುತ್ತಮ ವ್ಯಕ್ತಿ ಸಿಮನ್ಸ್ . ಅವರು ಈಗಲೂ ಉತ್ತಮ ವ್ಯಕ್ತಿ ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂದಿನವಾರ ಸೌತಾಂಪ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆರಂಭವಾಗಲಿದೆ. ಅದಕ್ಕೂ ಮುನ್ನ ಸಿಮನ್ಸ್ ಓಲ್ಡ್ ಟ್ರಾಫರ್ಡ್ನ ಆನ್ ಸೈಟ್ ಹೋಟೆಲ್ನಲ್ಲಿ ಸೆಲ್ಫ್ ಐಸೋಲೇಸನ್ನಲ್ಲಿ ಇರಲಿದ್ದಾರೆ.