ನವದೆಹಲಿ:ಭಾರತ ಕ್ರಿಕೆಟ್ನ ಭವಿಷ್ಯದ ತಾರೆಯಾಗಿರುವ ಶುಬ್ಮನ್ ಗಿಲ್ 2021ರ ಐಪಿಎಲ್ನಲ್ಲಿ ಕೆಕೆಆರ್ ನಾಯಕತ್ವದ ಗುಂಪಿನಲ್ಲಿರುತ್ತಾರೆ ಎಂದು ತಂಡದ ಮುಖ್ಯಕೋಚ್ ಬ್ರೆಂಡನ್ ಮೆಕಲಮ್ ತಿಳಿಸಿದ್ದಾರೆ.
20 ವರ್ಷದ ಶುಬ್ಮನ್ ಗಿಲ್ ಅತ್ಯುತ್ತಮ ಸಾಮರ್ಥ್ಯವುಳ್ಳ ಆಟಗಾರ. ಮುಂಬರುವ ಐಪಿಎಲ್ನಲ್ಲಿ ಇವರು ಕೋಲ್ಕತ್ತಾ ನೈಟ್ ರೈಡರ್ಸ್ನ ಮುಂದಾಳು ಕ್ರಿಕೆಟಿಗರ ಗುಂಪಿನ ಭಾಗವಾಗಲಿದ್ದಾರೆ ಎಂದು ಮೆಕಲಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯವೊಂದರಲ್ಲಿ ಶುಬ್ಮನ್ ಗಿಲ್ ಬ್ಯಾಟಿಂಗ್ ಶೈಲಿ ಗಿಲ್ ಜೊತೆ ಕೆಲಸ ಮಾಡುವುದಕ್ಕಾಗಿ ಎದುರು ನೋಡುತ್ತಿರುವುದಾಗಿಯೂ ಹಾಗೂ ಅವರಿಂದ ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನಿರೀಕ್ಷಿಸುತ್ತಿರುವುದಾಗಿ ಮೆಕ್ಕಲಮ್ ಹೇಳಿದ್ದಾರೆ. ಆತನಲ್ಲಿ ಅದ್ಭುತ ಪ್ರತಿಭೆಯಿದೆ. ಜೊತೆಗೆ ಒಳ್ಳೆಯ ಹುಡುಗ ಕೂಡಾ. ನಾಯಕತ್ವಕ್ಕೆ ಬೇಕಾಗುವಷ್ಟು ಸಾಮರ್ಥ್ಯ ಅವರಲ್ಲಿದೆ. ದೀರ್ಘಕಾಲ ಆಡಿದರೆ ಮಾತ್ರ ನೀವು ಉತ್ತಮ ನಾಯಕರಾಗಲಿದ್ದೀರಿ ಎನ್ನುವುದು ನಿಜವಲ್ಲ. ಆತ ಚಿಕ್ಕವನು, ಆದರೆ ಆತನ ಮೇಲೆ ನಾನು ದೊಡ್ಡ ನಂಬಿಕೆಯಿಟ್ಟಿದ್ದೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಆಡಿದ್ದ ಶುಬ್ಮನ್ ಗಿಲ್ಗೆ ಮುಂದಿನ ಐಪಿಎಲ್ನಲ್ಲಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಲು ಚಿಂತನೆ ನಡೆಸುವುದಾಗಿಯೂ ಮೆಕ್ಕಲಮ್ ತಿಳಿಸಿದ್ದಾರೆ.