ನವದೆಹಲಿ: ದೇವ್ಧರ್ ಟ್ರೋಫಿಯಲ್ಲಿ ಭಾರತ ಸಿ ತಂಡವನ್ನ ಮುನ್ನಡೆಸುತ್ತಿರುವ ಯುವ ಆಟಗಾರ ಶುಬ್ಮನ್ ಗಿಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನ ಬ್ರೇಕ್ ಮಾಡಿದ್ದಾರೆ.
2009-10 ನೇ ಸಾಲಿನ ದೇವ್ಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತರ ವಲಯ ತಂಡದ ನಾಯಕನಾಗಿದ್ದರು. ಆಗ ವಿರಾಟ್ ಕೊಹ್ಲಿಗೆ ಕೇವಲ 21 ವರ್ಷ ವಯಸ್ಸಾಗಿತ್ತು. ಈ ಮೂಲಕ ತಂಡವೊಂದನ್ನ ಮುನ್ನಡೆಸಿದ ಕಿರಿಯ ವಯಸ್ಸಿನ ನಾಯಕ ಎಂಬ ದಾಖಲೆಯನ್ನ ವಿರಾಟ್ ಬರೆದಿದ್ದರು.