ಕರ್ನಾಟಕ

karnataka

ETV Bharat / sports

ನಿಧಾನಗತಿ ಬೌಲಿಂಗ್.. ಸೋಲಿನ ಕಹಿ ಜತೆಗೆ ಶ್ರೇಯಸ್​ ಅಯ್ಯರ್​ಗೆ ₹12 ಲಕ್ಷ ದಂಡ - ಡೆಲ್ಲಿ ತಂಡದಿಂದ ನಿಧಾನಗತಿ ಓವರ್​ ಆಪರಾದ

ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್​ ಮಾಡಿದ್ದಕ್ಕೆ ವಿರಾಟ್​ ಕೊಹ್ಲಿ ಕೂಡ ದಂಡ ಕಟ್ಟಿದ್ದರು..

ನಿಧಾನಗತಿ ಬೌಲಿಂಗ್
ಶ್ರೇಯಸ್​ ಅಯ್ಯರ್​ಗೆ 12 ಲಕ್ಷ ರೂ. ದಂಡ

By

Published : Sep 30, 2020, 7:33 PM IST

ದುಬೈ :ಮಂಗಳವಾರ ನಡೆದ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ 15 ರನ್​ಗಳ ಸೋಲಿನೊಂದಿಗೆ ನಿರಾಶೆಯನುಭವಿಸಿದ್ದ ಡೆಲ್ಲಿ ತಂಡದ ನಾಯಕ ಶ್ರೇಯಸ್​ ಅಯ್ಯರ್​ಗೆ ಮತ್ತೊಂದು ಆಘಾತ ಎದುರಾಗಿದೆ. ನಿನ್ನೆಯ ಪಂದ್ಯದಲ್ಲಿ ನಿಗದಿತ ವೇಳೆ ಓವರ್​ ಪೂರ್ಣಗೊಳಿಸದ್ದಕ್ಕೆ ಅಯ್ಯರ್​ ₹12 ಲಕ್ಷ ದಂಡ ತೆರಬೇಕಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ ಬೌಲಿಂಗ್ ಮಾಡಲು ನಿಗದಿತ ಸಮಯಕ್ಕಿಂತ 23 ನಿಮಿಷ ಹೆಚ್ಚು ತೆಗೆದಿಕೊಂಡಿದ್ದರಿಂದ ₹12 ಲಕ್ಷ ದಂಡವಾಗಿ ವಿಧಿಸಲಾಗಿದೆ. ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್​ ಮಾಡಿದ್ದಕ್ಕೆ ವಿರಾಟ್​ ಕೊಹ್ಲಿ ಕೂಡ ದಂಡ ಕಟ್ಟಿದ್ದರು.

"ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಟೂರ್ನಿಯ ಮೊದಲ ಬಾರಿಗೆ ನಿಧಾನಗತಿಯ ಓವರ್‌ಗಳ ಅಪರಾಧಕ್ಕೆ ಒಳಗಾಗಿದೆ. ಅದಕ್ಕಾಗಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ" ಎಂದು ಐಪಿಎಲ್‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ABOUT THE AUTHOR

...view details