ಕರ್ನಾಟಕ

karnataka

ETV Bharat / sports

ಶ್ರೇಯಸ್ ಅಯ್ಯರ್​ಗೆ ಯಶಸ್ವಿ ಭುಜದ ಶಸ್ತ್ರಚಿಕಿತ್ಸೆ... ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಮುಂಬೈಕರ್

26 ವರ್ಷದ ಆಟಗಾರ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದ ವೇಳೆ ಜಾನಿ ಬೈರ್ಸ್ಟೋವ್ ಹೊಡೆದ ಚೆಂಡನ್ನು ಬೌಂಡರಿ ಲೈನ್ ಬಳಿ ತಡೆಯುವ ಸಂದರ್ಭದಲ್ಲಿ ಗಾಯಗೊಂಡಿದ್ದರು. ಅಸಾಧಾರಣ ನೋವಿನಿಂದ ಬಳಲುತ್ತಾ ಮೈದಾನದಿಂದ ಹೊರ ಬಂದಿದ್ದರು.

ಶ್ರೇಯಸ್ ಅಯ್ಯರ್​ಗೆ ಯಶಸ್ವಿ ಭುಜದ ಶಸ್ತ್ರಚಿಕಿತ್ಸೆ
ಶ್ರೇಯಸ್ ಅಯ್ಯರ್​ಗೆ ಯಶಸ್ವಿ ಭುಜದ ಶಸ್ತ್ರಚಿಕಿತ್ಸೆ

By

Published : Apr 8, 2021, 6:16 PM IST

ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್​ ಯಶಸ್ವಿ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆದಷ್ಟು ಬೇಗ ಕ್ರಿಕೆಟ್​ಗೆ ಮರಳುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಗುರುವಾರ ಆಸ್ಪತ್ರೆಯಲ್ಲಿ ಬೆಡ್​ ಮೇಲಿರುವ ಫೋಟೋವೊಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಅಯ್ಯರ್, "ಸಿಂಹ ಹೃದಯದ ದೃಢ ನಿಶ್ಚಯದಿಂದ​ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಹಿಂತಿರುಗುತ್ತೇನೆ, ಆದರೆ ಅದಕ್ಕೆ ನಿಗದಿತ ಸಮಯವಿಲ್ಲ. ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

26 ವರ್ಷದ ಆಟಗಾರ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದ ವೇಳೆ ಜಾನಿ ಬೈರ್ಸ್ಟೋವ್ ಹೊಡೆದ ಚೆಂಡನ್ನು ಬೌಂಡರಿ ಲೈನ್ ಬಳಿ ತಡೆಯುವ ಸಂದರ್ಭದಲ್ಲಿ ಗಾಯಗೊಂಡಿದ್ದರು. ಅಸಾಧಾರಣ ನೋವಿನಿಂದ ಬಳಲುತ್ತಾ ಮೈದಾನದಿಂದ ಹೊರ ಬಂದಿದ್ದರು.

ನಂತರ ಏಕದಿನ ಸರಣಿಯಿಂದ ಹೊರ ಬಿದ್ದಿದ್ದರು. ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿದ ಮೇಲೆ ಐಪಿಎಲ್​ನಿಂದಲೂ ಹೊರ ಬಿದ್ದಿದ್ದು, ಇವರ ಬದಲು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನೇತೃತ್ವವನ್ನು ರಿಷಭ್ ಪಂತ್​ಗೆ ವಹಿಸಲಾಗಿದೆ. ಅಲ್ಲದೆ ಈ ಬಾರಿ ಲಂಕಾಷೈರ್ ತಂಡದ ಪರ ರಾಯಲ್ ಲಂಡನ್ ಟೂರ್ನಿಗೆ ಆಯ್ಕೆಯಾಗಿದ್ದ ಶ್ರೇಯಸ್ ಗಾಯದ ಕಾರಣ ಅದನ್ನು ತಪ್ಪಿಸಿಕೊಳ್ಳಲಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಚೇತರಿಸಿಕೊಳ್ಳಲು ಸುಮಾರು ಮೂರದಿಂದ ನಾಲ್ಕು ತಿಂಗಳ ಕಾಲಾವಧಿ ಬೇಕಾಗಬಹುದು ಎನ್ನಲಾಗಿದೆ.

ಇದನ್ನು ಓದಿ:ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಭುವನೇಶ್ವರ್ ಕುಮಾರ್​

ABOUT THE AUTHOR

...view details