ರಾಜ್ಕೋಟ್: ಮೊದಲ ಟಿ20ಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲನುಭವಿಸಿದ್ದ ಭಾರತ ತಂಡ ಎರಡನೇ ಪಂದ್ಯವನ್ನು ಗೆಲ್ಲಲೇಬೇಕೆಂಬ ಛಲದಿಂದ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಫಿಟ್ನೆಸ್ ಕಡೆಗೂ ಗಮನ ನೀಡಿದ್ದು, ಜಿಮ್ನಲ್ಲಿ ಎಲ್ಲಾ ಆಟಗಾರರು ಬೆವರಿಳಿಸುತ್ತಿದ್ದಾರೆ.
ಕ್ರಿಕೆಟ್ನಲ್ಲಿ ಆಟಗಾರರು ಕ್ರಿಕೆಟ್ ಆಟದ ಬಗ್ಗೆ ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಫಿಟ್ನೆಸ್ ಕಡೆಗೂ ಗಮನ ಹರಿಸುವುದು ಪ್ರಮುಖವಾಗಿರುತ್ತದೆ. ರಾಜ್ಕೋಟ್ನಲ್ಲಿ ಎರಡನೇ ಟಿ20 ಕದನ ನಡೆಯಲಿದ್ದು, ಇದಕ್ಕೂ ಮುನ್ನ ಆಟಗಾರರು ಕೆಲಕಾಲ ಜಿಮ್ನಲ್ಲಿ ಬೆವರಿಳಿಸಿದರು.