ಪುಣೆ:ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ವೇಳೆ ಭುಜದ ನೋವಿನಿಂದ ಬಳಲಿದ್ದು, ಮೈದಾನದಿಂದ ಹೊರಬಂದಿದ್ದಾರೆ.
8ನೇ ಓವರ್ನಲ್ಲಿ ಜಾನಿ ಬೈರ್ಸ್ಟೋವ್ ಬಾರಿಸಿದ ಚೆಂಡನ್ನು ತಡೆಯಲು ಓಡಿದ ಶ್ರೇಯಸ್ ಬೌಂಡರಿ ತಡೆಯುವಲ್ಲಿ ಯಶಸ್ವಿಯಾದರು. ಅವರು ತಂಡಕ್ಕೆ 2 ರನ್ ಉಳಿಸಿದರಾದರೂ ಡೈವ್ ಮಾಡಿದಾಗ ಅವರ ಬಲ ಭುಜ ನೋವಿಗೆ ತುತ್ತಾಗಿ ಮೈದಾನದಿಂದ ಫಿಸಿಯೋ ಜೊತೆಗೆ ಹೊರ ಹೋದರು. ಅವರ ಬದಲಿಗೆ ಶುಬ್ಮನ್ ಗಿಲ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, 8ನೇ ಓವರ್ನಲ್ಲಿ ಶ್ರೇಯಸ್ ಬೌಂಡರಿ ತಡೆಯುವ ಯತ್ನದಲ್ಲಿ ಎಡ ಭುಜದ ನೋವಿಗೆ (ಸಬ್ಲಕ್ಸೇಟೆಡ್) ಒಳಗಾಗಿದ್ದು, ಅವರನ್ನು ಸ್ಕ್ಯಾನ್ಗಾಗಿ ಕಳುಹಿಸಲಾಗಿದೆ. ಅವರು ಈ ಪಂದ್ಯದ ಮುಂದಿನ ಭಾಗದಲ್ಲಿ ಲಭ್ಯರಿರುವುದಿಲ್ಲ ಎಂದು ಟ್ವೀಟ್ ಮಾಡಿದೆ.
ಇನ್ನು ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ವೇಳೆ ಮೊಣ ಕ್ಕೈಗೆ ಚೆಂಡು ಬಡಿದಿರುವುದರಿಂದ ನೋವು ಕಾಣಿಸಿಕೊಂಡಿದ್ದು, ಅವರೂ ಕೂಡ ಫೀಲ್ಡಿಂಗ್ ವೇಳೆ ಮೈದಾನಕ್ಕೆ ಆಗಮಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಸೂರ್ಯಕುಮಾರ್ ಯಾದವ್ ರೋಹಿತ್ ಬದಲು ಫೀಲ್ಡಿಂಗ್ ಮಾಡುತ್ತಿದ್ದಾರೆ.
ಇದನ್ನು ಓದಿ: ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕೃನಾಲ್ ಪಾಂಡ್ಯ