ಬೆಂಗಳೂರು:ಕರ್ನಾಟಕ ರಣಜಿ ತಂಡದ ನಾಯಕ ಕರುಣ್ ನಾಯರ್ ಜನವರಿ 16ರಂದು ಗೃಹಸ್ಥಾಶ್ರಮಕ್ಕೆ ಕಾಲಿಡಲಿರುವುದರಿಂದ ಸೌರಾಷ್ಟ್ರದ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೆಣಸಲಿದೆ. ನಾಯಕ ಕರುಣ್ ನಾಯರ್ ವಿವಾಹದ ಕಾರಣದಿಂದ ತಂಡದಿಂದ ಹೊರಗುಳಿದರೆ, ತಂಡದಿಂದಅಭಿಷೇಕ್ ರೆಡ್ಡಿ ಕೈಬಿಡಲಾಗಿದೆ.
ಇವರಿಬ್ಬರ ಜಾಗಕ್ಕೆ ಬದಲಿ ಆಟಗಾರರನ್ನು ಈಗಾಗಲೇ ಕೆಎಸ್ಸಿಎ ಘೋಷಣೆ ಮಾಡಿದ್ದು, ಕೆ ವಿ ಸಿದ್ದಾರ್ಥ್ ಹಾಗೂ ಗಾಯದಿಂದ ಚೇತರಿಸಿರುವ ಪವನ್ ದೇಶಪಾಂಡೆ ಸೌರಾಷ್ಟ್ರ ವಿರುದ್ಧ ಕಣಕ್ಕಿಳಿಯಲಿದ್ದಾರೆ.