ಕರ್ನಾಟಕ

karnataka

ETV Bharat / sports

'ಭಯೋತ್ಪಾದಕ ದೇಶ ಬಿಡಲೇಬೇಕು'... ಟ್ವೀಟ್​ ಲೈಕ್​ ಮಾಡಿದ ಬೌಲರ್​ ಮೊಹಮ್ಮದ್​​ ಅಮೀರ್​!

'ಭಯೋತ್ಪಾದಕ ದೇಶ ಬಿಡಲೇಬೇಕು' ಎಂದು ವ್ಯಕ್ತಿಯೊಬ್ಬ ಮಾಡಿರುವ ಟ್ವೀಟ್​ಗೆ ಪಾಕ್​​ನ ವೇಗದ ಬೌಲರ್​ ಮೊಹಮ್ಮದ್​ ಅಮೀರ್​ ಲೈಕ್​ ಮಾಡಿದ್ದು, ಇದೀಗ ಅದು ವಿವಾದ ರೂಪ ಪಡೆದುಕೊಂಡಿದೆ.

ಬೌಲರ್​ ಮೊಹಮ್ಮದ್​​ ಅಮೀರ್

By

Published : Jul 29, 2019, 5:10 PM IST

ಇಸ್ಲಾಮಾಬಾದ್​​: ಪಾಕಿಸ್ತಾನ ಕ್ರಿಕೆಟ್​​ನ ವೇಗದ ಬೌಲರ್​ ಮೊಹಮ್ಮದ್​ ಅಮೀರ್​ ಕೇವಲ ತಮ್ಮ 27ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದು, ಇದರ ಮಧ್ಯೆ ಬ್ರಿಟಿಷ್​ ಪೌರತ್ವಕ್ಕೆ ಅರ್ಜಿ ಹಾಕಿದ್ದಾರೆ.

ಅಮೀರ್ ಈಗಾಗಲೇ ಬ್ರಿಟನ್ ಮೂಲದ ನರ್ಗಿಸ್ ಮಲಿಕ್ ಎಂಬವರನ್ನು 2016ರಲ್ಲಿ ವಿವಾಹವಾಗಿದ್ದು, ಅಲ್ಲಿ ನೆಲೆಸಲು ಕೇವಲ 30 ತಿಂಗಳ ವೀಸಾ ಪಡೆದಿದ್ದರು. ಇದೀಗ ಸಂಪೂರ್ಣವಾಗಿ ಇಂಗ್ಲೆಂಡ್​ನಲ್ಲೇ ನೆಲೆಸುವ ಉದ್ದೇಶದಿಂದ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿ, ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಮೊಹಮ್ಮದ್​ ಅಮೀರ್​​ ಟ್ವೀಟ್​​ವೊಂದನ್ನ ಲೈಕ್​ ಮಾಡಿ, ವಿವಾದ ಮೈಮೇಲೆ ಎಳೆದು ಕೊಂಡಿದ್ದಾರೆ.

ಪಾಕಿಸ್ತಾನದ ಪತ್ರಕರ್ತ ಸಾಜ್​​ ಸಜೀದ್​​, ಮೊಹಮ್ಮದ್​ ಅಮೀರ್​​ ಬ್ರಿಟಿಷ್​ ಪೌರತ್ವ ಪಡೆದುಕೊಳ್ಳುವುದರ ಕುರಿತು ಎಲ್ಲರೂ ಯಾಕೆ ಇಷ್ಟೊಂದು ಚರ್ಚೆ ಮಾಡಬೇಕು. ಅದನ್ನ ಪಡೆದುಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ರೀಡಾಭಿಮಾನಿ ಒಬ್ಬ ನನಗೆ ಅನಿಸಿರುವ ಪ್ರಕಾರ, ಮೊಹಮ್ಮದ್​ ಅಮೀರ್​ ಇನ್ಮುಂದೆ ಭಯೋತ್ಪಾದಕ ದೇಶದಲ್ಲಿ ಇರಲು ಇಷ್ಟಪಡುತ್ತಿಲ್ಲ. ಹೀಗಾಗಿ ಉಗ್ರರ ದೇಶ ತೊರೆದು ಬೇರೆಡೆ ನೆಲೆಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಇದನ್ನೇ ಪಾಕ್​ ಬೌಲರ್​ ಮೊಹಮ್ಮದ್​ ಅಮೀರ್​ ಲೈಕ್​ ಮಾಡಿದ್ದಾರೆ. ಅವರು ಟ್ವೀಟ್​ ಲೈಕ್​ ಮಾಡುತ್ತಿದ್ದಂತೆ ವಿವಾದ ಉದ್ಭವವಾಗಿದೆ.

ಇದೇ ವಿಷಯವನ್ನಿಟ್ಟುಕೊಂಡು ಅನೇಕರು ಮೊಹಮ್ಮದ್​ ಅಮೀರ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಚಿಕ್ಕ ವಯಸ್ಸಿನಲ್ಲೇ ಮೊಹಮ್ಮದ್​ ಅಮೀರ್​ ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಂಡಿದ್ದಕ್ಕಾಗಿ ಪಾಕ್​ನ ಅನೇಕ ದಿಗ್ಗಜ ಕ್ರಿಕೆಟರು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಇದು ಆಕಸ್ಮಿಕ... ಉದ್ದೇಶ ಪೂರ್ವಕವಲ್ಲ:

ಇದೇ ವೇಳೆ, ಈ ಟ್ವೀಟ್​ ಲೈಕ್​​ ಮಾಡಿದ್ದು ವಿವಾದಕ್ಕೆ ಒಳಗಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮೊಹಮ್ಮದ್​ ಅಮೀರ್​ ಬೈ ಮಿಸ್ಟೇಕ್​ ಆಗಿ ಬಟನ್​ ಒತ್ತಿದ್ದೇನೆ. ಅದು ಆಕಸ್ಮಿಕವಾಗಿ ಆದ ಘಟನೆ. ಆ ವಿಚಾರ ನನ್ನ ತಲೆಯಲ್ಲೇ ಇಲ್ಲ, ಸ್ಕ್ರಾಲ್​ ಮಾಡುವಾಗ ಕಣ್ತಪ್ಪಿನಿಂದ ಆದ ಲೈಕ್​ ಇದಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಪಾಕ್​ ತಂಡವನ್ನು ಪ್ರತಿನಿಧಿಸಿರುವುದು ನನಗೆ ಸಿಕ್ಕ ಗೌರವ ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ABOUT THE AUTHOR

...view details