ದುಬೈ : ಭಾರತ ಏಕದಿನ ಕ್ರಿಕೆಟ್ ತಂಡದಿಂದ ಅವಕಾಶ ವಂಚಿತನಾಗಿರುವ ಅಜಿಂಕ್ಯಾ ರಹಾನೆ 2018ರಿಂದ ಏಕದಿನ ಕ್ರಿಕೆಟ್ ಆಡಿಲ್ಲ. ಆದರೆ 2019ರ ವಿಶ್ವಕಪ್ನಲ್ಲಿ ನಾನು ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕೆಂಬ ಬಯಕೆ ಇದ್ದಿದ್ದು ನಿಜ ಎಂದು ಹೇಳಿಕೊಂಡಿದ್ದಾರೆ.
ದೆಹಲಿ ಕ್ಯಾಪಿಟಲ್ ತಂಡದೊಂದಿಗೆ ಮುಂಬರುವ ಐಪಿಎಲ್ನಲ್ಲಿ ಆಡುತ್ತಿರುವ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರುವುದಕ್ಕೆ ನಿರಾಶೆಗೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ.
ನನ್ನ ಸದ್ಯದ ಗುರಿ ಡೆಲ್ಲಿ ಕ್ಯಾಪಿಟಲ್ ತಂಡದ ಪರ ಉತ್ತಮ ಪ್ರದರ್ಶನ ತೋರುವುದಾಗಿದೆ. ನನ್ನ ಏಕದಿನ ಪುನರಾಗಮನದ ಬಗ್ಗೆ ನನಗೆ ಖಾತ್ರಿಯಿದೆ, ಮತ್ತು ನನಗೆ ನನ್ನ ಮೇಲೆ ನಂಬಿಕೆಯಿದೆ. ಈಗ ಅದರ(ವಿಶ್ವಕಪ್) ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಆದರೆ ವಿಶ್ವಕಪ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ನಾನು ಆಡುತ್ತೇನೆಂದು ನಾನು ಭಾವಿಸಿದ್ದೆ ಎಂದು ರಹಾನೆ ಮಾಧ್ಯಮಗಳ ಮುಂದೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.