ಕರಾಚಿ:ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಪಿಸಿಬಿ ಆಯ್ಕೆ ಸಮಿತಿ ಬುಧವಾರ ಪ್ರಕಟಿಸಿರುವ 35 ಆಟಗಾರರ ಪಟ್ಟಿಯಲ್ಲಿ ಹಿರಿಯ ಬ್ಯಾಟ್ಸ್ಮನ್ ಶೋಯಭ್ ಮಲಿಕ್ ಮತ್ತು ವೇಗಿ ಮೊಹಮ್ಮದ್ ಅಮೀರ್ರನ್ನು ಕೈಬಿಡಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಸರಣಿಗಳಿಗೆ ಸೇರಿದಂತೆ ಒಟ್ಟು 35 ಆಟಗಾರರನ್ನು ಬಿಡುಗಡೆ ಮಾಡಿದೆ. ಆದರೆ ಯಾವ ಸರಣಿಗೆ ಯಾವ ಆಟಗಾರರು ಎನ್ನುವುದನ್ನ ಖಚಿತಪಡಿಸಿಲ್ಲ.
ಇನ್ನು ಈ ಸರಣಿಯಲ್ಲಿ ಟೆಸ್ಟ್ ಮತ್ತು ಟಿ20 ಸರಣಿಗಳೆರಡರಲ್ಲೂ ಬಾಬರ್ ಅಜಮ್ ನಾಯಕರಾಗಲಿದ್ದಾರೆ. ಟೆಸ್ಟ್ ತಂಡದ ಉಪನಾಯಕನಾಗಿ ಮೊಹಮ್ಮದ್ ರಿಜ್ವಾನ್ ನೇಮಕಗೊಂಡಿದ್ದಾರೆ.
ಯುವ ಆಟಗಾರರಿಗೆ ಮಾನ್ಯತೆ ನೀಡುವ ದೃಷ್ಟಿಯಿಂದ 38 ವರ್ಷದ ಶೋಯಬ್ ಮಲಿಕ್ ಮತ್ತು ಮೊಹಮ್ಮದ್ ಅಮೀರ್ರನ್ನು ಆಯ್ಕೆಗಾರರು ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ. ಕೇವಲ ಟಿ20 ಕ್ರಿಕೆಟ್ನಲ್ಲಿ ಮಾತ್ರ ಆಡುತ್ತಿರುವ ಮಲಿಕ್ರನ್ನು ತಂಡದಿಂದ ಕೈಬಿಟ್ಟಿರುವುದರಿಂದ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡಕ್ಕೂ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಇನ್ನು ಫಾರ್ಮ್ನಲ್ಲಿಲ್ಲದ ಅಸಾದ್ ಶಫೀಕ್ರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ರಾಷ್ಟ್ರೀಯ ತಂಡದ ಕ್ಯಾಪ್ ಧರಿಸಿದ ಅಮದ್ ಬಟ್, ಡ್ಯಾನೀಶ್ ಅಜೀಜ್, ಇಮ್ರಾನ ್ಬಟ್ ಹಾಗೂ ರೊಹೈಲ್ ನಜೀರ್ರನ್ನು ಪಿಸಿಬಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.